ಕಂದಾವರ: ಪರವಾನಿಗೆ ಮುಗಿದರೂ ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ

ನಾಗರೀಕರು ಸತತ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಅಧಿಕಾರಿಗಳು; ಅಕ್ರಮದ ಹಿಂದೆ ಗಣಿ ಇಲಾಖೆ, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಶಾಮೀಲು ಶಂಕೆ.! ಇನ್ನಾದರೂ ಕಂದಾವರ ಪದವಿನ ಜನತೆಯ ರೋಧನ ಇಲಾಖೆಯ ಕಿವಿಗೆ ಮುಟ್ಟಲಿ ದುಡ್ಡಿನ ಬಲ, ಅಧಿಕಾರಿಗಳ ಬೆಂಬಲ ಇದ್ದರೆ ಕಾನೂನಿಗೆ ಮಣ್ಣೆರಚಿ ಅಕ್ರಮ ವಹಿವಾಟು ನಡೆಸಬಹುದು ಅನ್ನುವುದಕ್ಕೆ ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಪದವಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಯೇ ಅಪ್ಪಟ ಸಾಕ್ಷಿ. 2023 ರಲ್ಲಿ ಸ್ಥಳೀಯ ನಾಗರಿಕರು ಕಂದಾವರ […]

Continue Reading

ಪುತ್ತೂರು ಅಶ್ರಫ್ ಕಲ್ಲೇಗರಿಗೆ ಐದು ಲಕ್ಷ ಬಾಂಡ್ ಮುಚ್ಚಳಿಕೆ ಕೋರಿ ನೋಟೀಸು ಆಘಾತಕಾರಿ: ಮುನೀರ್ ಕಾಟಿಪಳ್ಳ

ಅಶ್ರಫ್ ಕಲ್ಲೇಗ ಅವರಿಗೆ ಪುತ್ತೂರು ಪೊಲೀಸರ ವರದಿಯ ಆಧಾರದಲ್ಲಿ ತಾಲೂಕು ದಂಡಾಧಿಕಾರಿಗಳು BNSS ಕಾಯ್ದೆ 130 ಅಡಿ ಐದು ಲಕ್ಷ ರೂಪಾಯಿ ಬಾಂಡ್ ಹಾಗು ಜಾಮೀನು ಮುಚ್ಚಳಿಕೆ ನೀಡುವಂತೆ ನಿರ್ದೇಶಿಸಿ ನೋಟೀಸು ನೀಡಿರುವುದು ತಿಳಿದು ಆಘಾತವಾಯ್ತು. ಅಶ್ರಫ್ ಕಲ್ಲೇಗ ಪುತ್ತೂರು ಭಾಗದಲ್ಲಿ ಸಕ್ರಿಯರಾಗಿರುವ ಜಿಲ್ಲೆಯ ಹಿರಿಯ ರಾಜಕಾರಣಿ. ಜನತಾದಳ, ಜಾತ್ಯಾತೀತ ಜನತಾ ದಳದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದವರು. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು. ರಾಜಕೀಯದ ಆಚೆಗೂ ಸಾಮಾಜಿಕ, ಸಾಮುದಾಯಿಕ ಕೆಲಸಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಮುಸ್ಲಿಮ್ ಯುವಜನ […]

Continue Reading

ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ‘ಸಕ್ರಮ’ ಮರಳುಗಾರಿಕೆ.. ಆದರೆ ನಡೆಯುತ್ತಿರುವುದು ಅಕ್ರಮ.. ಅಕ್ರಮ!

‘ಲೀಸ್’ ಹೆಸರಲ್ಲಿ ಗಡಿ ಗುರುತು ಮೀರಿ ಮರಳು ದೋಚುತ್ತಿದ್ದಾರೆ.. ಜಿಲ್ಲಾಡಳಿತ, ಗಣಿ ಇಲಾಖೆ ಮಾತ್ರ ಜಾಣ ಮೌನಕ್ಕೆ ಶರಣು! ‘ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳ್ತಾರೆ’ ಅನ್ನುವ ಗಾದೆ ಮಾತು ಚಾಲ್ತಿಯಲ್ಲಿದೆ. ಕಳ್ಳರು ಎಷ್ಟೇ ಚಾಣಾಕ್ಯರಾದರೂ ಅಧಿಕಾರಿಗಳ ಬುದ್ಧಿವಂತಿಕೆಯ ಎದುರು ಅವರ ಕಾರುಬಾರು ನಡೆಯುವುದಿಲ್ಲ ಅನ್ನುವುದು ಒಟ್ಟಾರೆ ಇದರ ಅರ್ಥ. ಆದರೆ ಈ ಮರಳುಗಾರಿಕೆ ವಿಷಯದಲ್ಲಿ ಈ ಗಾದೆ ಮಾತು ಸ್ವಲ್ಪ ಉಲ್ಟಾ-ಪಲ್ಟಾ ಆಗಿದೆ. ಅಧಿಕಾರಿಗಳು ಎಷ್ಟೇ ಬುದ್ಧಿವಂತರಾದರೂ ಈ ಮರಳುಗಾರಿಕೆ ನಡೆಸುವ […]

Continue Reading

ಹೇರಂಜಾಲು ಯಕ್ಷ ಸಂಭ್ರಮ : ಹೇರಂಜಾಲು ಕೃತಿ ಲೋಕಾರ್ಪಣೆ : ಹೇರಂಜಾಲು ಗೌರವ ಪುರಸ್ಕಾರ ಪ್ರದಾನ

ಯಕ್ಷಗಾನಕ್ಕೆ ಹೇರಂಜಾಲು ಗೋಪಾಲ ಗಾಣಿಗರ ಕೊಡುಗೆ ಅಪಾರ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಉಡುಪಿ : ಓರ್ವ ಯಕ್ಷಗಾನ ಕಲಾವಿದ, ಓರ್ವ ಭಾಗವತ ಹೇಗಿರಬೇಕು ಎಂಬುದಕ್ಕೆ ಹೇರಂಜಾಲು ಗೋಪಾಲ ಗಾಣಿಗರೇ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಯಕ್ಷಗಾನ ಕಲೆಗೆ ಅವರ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಶಿವರಾಮ ಶೆಟ್ಟಿ ಹೇಳಿದರು. ಅವರು ಎಂಜಿಎo ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಹೇರಂಜಾಲು ಯಕ್ಷ ಬಳಗದಿಂದ ಹೇರಂಜಾಲು ಯಕ್ಷ ಸಂಭ್ರಮ, ಹೇರಂಜಾಲು ಕೃತಿ ಲೋಕಾರ್ಪಣೆ […]

Continue Reading

ಮಂಗಳೂರು ಉತ್ತರದತ್ತ ಬಂಟರ ಚಿತ್ತ. ಮುಸ್ಲಿಮರಿಗೆ ಗೂಟ.! ರಾಜಕೀಯದಾಟ ಬಲ್ಲವರಾರು.?

ಕೆಟ್ಟ ಮೇಲೆ ಬುದ್ಧಿ ಬರುವ ಕಾಂಗ್ರೆಸ್ಸಿನ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜಕಾರಣದಲ್ಲಿ ಬಿರುಸಿನ ರಾಜಕಾರಣ ತೆರೆಮರೆಯಲ್ಲಿ ನಡೆಯುತ್ತಿರುವುದಂತೂ ಸುಳ್ಳಲ್ಲ. ಅದರಲ್ಲೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಭರ್ಜರಿಯಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಕನ್ನಡ, ಉಡುಪಿ ರಾಜಕಾರಣದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರಾವಳಿ ರಾಜಕಾರಣದ ಬಗ್ಗೆ ಹೆಚ್ಚು ಗಂಭೀರ ಚಿಂತನೆಯಲ್ಲಿ ತೊಡಗಿಸಿಕೊಂಡಂತೆ ಕಾಣುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪುತ್ತೂರಿನಲ್ಲಿ ಬಿಜೆಪಿಯ ಅಶೋಕ್ […]

Continue Reading

ಬೆಳ್ತಂಗಡಿ: ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯ ಸೆರೆ.

ಬೆಳ್ತಂಗಡಿ ಮಾಲಾಡಿಯಲ್ಲಿ ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಮಾಲಾಡಿ ಗ್ರಾಮದ ನಿವಾಸಿ ಪ್ರಕಾಶ್‌ ಶೆಟ್ಟಿ (53) ಎಂಬವರ ದೂರಿನಂತೆ, ಸದ್ರಿಯವರ ಮನೆಯ ಸಮೀಪ ಶ್ರೀಮತಿ ಪ್ರೇಮಾ ಶೆಟ್ಟಿ ಎಂಬವರ ಮನೆಯಿದ್ದು, ಸದ್ರಿ ಪ್ರೇಮಾ ಶೆಟ್ಟಿರವರು ಕೆಲ ಸಮಯದಿಂದ ವಿದೇಶದಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಗೆ ಸಿ.ಸಿ ಟಿ.ವಿ ಅಳವಡಿಸಿರುತ್ತಾರೆ. ನವೆಂಬರ್ 9 ರಂದು ಬೆಳಿಗ್ಗೆ ಪ್ರೇಮಾರವರ ಮಗಳು ಪ್ರಕಾಶ್ ಶೆಟ್ಟಿ ಅವರಿಗೆ ಕರೆ ಮಾಡಿ ಅವರ ತಾಯಿಯ ಮನೆಯಲ್ಲಿ ಯಾರೋ […]

Continue Reading

BIG iMPACT ಮಳಲಿ ಅಣೆಕಟ್ಟಿನ ಬಳಿ ರೂಲ್ಸ್ ಬ್ರೇಕ್ ಮಾಡಿ ಅಕ್ರಮ ಮರಳುಗಾರಿಕೆ; ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ

ನಿನ್ನೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿ ಪ್ರಕಟಿಸಿತ್ತು ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿ ಅಣೆಕಟ್ಟಿನ ಬುಡದಲ್ಲೇ ಅಕ್ರಮ ಮರಳುಗಾರಿಕೆ ನಡೆಸಿ , ಅಣೆಕಟ್ಟು ಕುಸಿಯುವ ಭೀತಿ ಎದುರಾಗಿದ್ದು ಸ್ಥಳೀಯ ನಾಗರೀಕರು ಆತಂಕಕ್ಕೆ ಒಳಗಾಗಿದ್ದರು. ಯಾವುದೇ ಸೇತುವೆ ಅಥವಾ ಅಣೆಕಟ್ಟಿನಿಂದ 500 ಮೀಟರ್ ಅಂತರದಲ್ಲಿ ಮರಳುಗಾರಿಕೆ ಅಥವಾ ಇನ್ನಿತರ ನಿರ್ಮಾಣ ಚಟುವಟಿಕೆ ನಡೆಸಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮವಿದೆ. ಇಲಾಖೆಯು ಈಗಾಗಲೇ ಗುರುತಿಸಿರುವ ಗಡಿ ಗುರುತು ಉಲ್ಲಂಘಿಸಿ ಅಣೆಕಟ್ಟಿನ ಎರಡೂ […]

Continue Reading

ಮಳಲಿ: ಅಣೆಕಟ್ಟಿನ ಬಳಿ ರೂಲ್ಸ್ ಬ್ರೇಕ್; ಅಕ್ರಮ ಮರಳುಗಾರಿಕೆ ಅಣೆಕಟ್ಟು ಕುಸಿಯುವ ಆತಂಕ.!

ಗಂಜಿಮಠ ಗ್ರಾಮ ಸಭೆ ನಿರ್ಣಯಕ್ಕೆ ಇಲ್ಲ ಬೆಲೆ; ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ದೂರು ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿ ಆಣೆಕಟ್ಟಿನ ಬುಡದಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಮರಳುಗಾರಿಕೆ ನಿಷೇಧಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ. ಗಂಜಿಮಠ ಪಂಚಾಯಿತಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ಹಲವು ಬಾರಿ ವಿಷಯ ಪ್ರಸ್ತಾಪಗೊಂಡಿದ್ದವು. ಜನವರಿ 8 ರಂದು ಗ್ರಾಮ ಸಭೆಯಲ್ಲಿ ಮರಳುಗಾರಿಕೆ ನಿಷೇಧಿಸುವಂತೆ ನಿರ್ಣಯ ಕೂಡ ಮಾಡಲಾಗಿತ್ತು. ಆದರೆ ಅವೆಲ್ಲವೂ ಕಸದ ಬುಟ್ಟಿ ಸೇರಿದೆ. […]

Continue Reading

ಕರಾವಳಿಯ ಪಾತಕ ಜಗತ್ತಿನಲ್ಲಿ ನಡೆದಿದೆ ಸಾಲು ಸಾಲು ಮೋಸದ ಮರ್ಡರ್!

ವಾಮಂಜೂರು ರೋಹಿ ಯಿಂದ ಉಡುಪಿಯ ಸೈಪುದ್ದೀನ್ ವರೆಗಿನ ಹತ್ಯೆಯ ಕಹಾನಿ ಬಜಾಲ್ ನೌಫಲ್ ಚಾಪ್ಟರ್ ಕ್ಲೋಸ್ ಹಿಂದಿದೆ ಇಂತಹ ಅನುಮಾನ.! ಇವತ್ತಿನ ಹಾಗೆ ಚಿಲ್ಟು ಪಲ್ಟುಗಳಲ್ಲ. ಬಲಾಢ್ಯ ರೌಡಿಗಳು ಮಂಗಳೂರು ಭೂಗತ ಲೋಕವನ್ನು ಆಳುತ್ತಿದ್ದರು. ಒಬ್ಬೊಬ್ಬರ ಹೆಸರು ಕೇಳಿದಾಗಲೇ ಗಡಗಡ ನಡುಗುವಂತಹ ರೌಡಿಗಳು ಮಂಗಳೂರಿನಲ್ಲಿ ವಿಜೃಂಭಿಸುತ್ತಿದ್ದ ಕಾಲವೊಂದಿತ್ತು. ಆದರೆ ಅವರು ಕಟುಕರು, ರೌಡಿಗಳಾದರೂ ಸ್ವಲ್ಪ ಮಟ್ಟಿನ ಮಾನವೀಯತೆ, ಕರುಣೆ ಎಂಬುದು ಅವರಲ್ಲಿ ಇತ್ತು. ತಮ್ಮ ವಿರೋಧಿ ಗುಂಪಿನವನನ್ನು ಕೊಲ್ಲಲು ಬಂದಾಗ ಆತನ ಜೊತೆ ಹೆಂಡತಿ, ಮಕ್ಕಳು, ತಾಯಿ […]

Continue Reading

ಅಡ್ಡೂರು: ಗರೋಡಿ ಮನೆ ಅಂಗಳದಲ್ಲಿ ಯಶಸ್ವಿಯಾಗಿ ಜರುಗಿದ ‘ನಿಲಾವುರೋ ಬೆಳ್ಕ್ ರ್ಲ್ ಒರು ಕೂಟ ಚೋರು’ ಕಾರ್ಯಕ್ರಮ

ಬ್ಯಾರಿ ಕಲಾರಂಗ ಮೈಕಾಲ ಇದರ ವತಿಯಿಂದ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ ಅಡ್ಡೂರು ಗರೋಡಿ ಮನೆ ಅಂಗಳದಲ್ಲಿ ‘ನಿಲಾವುರೋ ಬೆಳ್ಕ್ ರ್ಲ್ ಒರು ಕೂಟ ಚೋರು’ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಪೂರ್ವಜರ ಕಾಲದ ನೆನಪುಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿ ‘ನಿಲಾವುರೋ ಬೆಳ್ಕ್ ರ್ಲ್ ಒರು ಕೂಟ ಚೋರು’ ಕಾರ್ಯಕ್ರಮ ಮೂಡಿಬಂತು. ಮದ್ರಸ ಮ್ಯಾನೇಜ್ ಮೆಂಟ್ ಕಮಿಟಿ ಅಧ್ಯಕ್ಷರಾದ […]

Continue Reading