ಧಾರ್ಮಿಕ -ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಮುಂದಾಳು ವಿಠಲ ಪೂಜಾರಿ ಅತಿಕಾರಿಬೈಲು ಆತ್ಮಹತ್ಯೆ.

ತೀರಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಮುಂದಾಳು ವಿಟ್ಲ ಹೊರವಲಯದ ವಿಠಲ ಪೂಜಾರಿ (49) ಅತಿಕಾರಬೈಲು ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕೇಸರಿ ಅತಿಕಾರಬೈಲು ಸಂಘಟನೆ, ಚಂದಳಿಕೆ ಶಾಲಾ SDMCಯ ಅಧ್ಯಕ್ಷರಾಗಿ, ನಾಟಕ ಕಲಾವಿದ ಮತ್ತು ಬಿಲ್ಲವ ಸಂಘದಲ್ಲಿ ತೊಡಗಿಸಿಕೊಂಡಿದ್ದ ವಿಠಲ ಪೂಜಾರಿ ಮನೆ ಸಮೀಪದ ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಮಂಜನಾಡಿ ಅಡುಗೆ ಅನಿಲ ದುರಂತ, ಸಮಗ್ರ ತನಿಖೆ ನಡೆಯಬೇಕು, ಶಾಸಕ ಯು. ಟಿ ಖಾದರ್ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು: ಮುನೀರ್ ಕಾಟಿಪಳ್ಳ

ಉಳ್ಳಾಲ ತಾಲೂಕು ಮಂಜನಾಡಿಯ ಮನೆಯೊಂದರಲ್ಲಿ ನಡೆದ ಅಡುಗೆ ಅನಿಲ ಸಿಲಿಂಡರ್ ಸ್ಪೋಟದಲ್ಲಿ ಮೃತ ಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಗಾಯಾಳುಗಳಾಗಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದ ತಾಯಿ ಹಾಗೂ ಮೂವರು ಹೆಣ್ಣುಮಕ್ಕಳಲ್ಲಿ ಮೂರು ವಾರಗಳ ಅವಧಿಯಲ್ಲಿ ಮೂವರು ಮೃತ ಪಟ್ಟಿದ್ದಾರೆ. ಈ ದುರಂತದ ದಾರುಣತೆಗೆ ಜನ ಸಮೂಹ ದುಃಖತಪ್ತವಾಗಿದೆ. ಜೊತೆಗೆ ಬೆಚ್ಚಿಬಿದ್ದಿದೆ. ರಾಜ್ಯ ಸರಕಾರ ಪರಿಹಾರ ಧನ ಘೋಷಿಸಲು ವಿಳಂಬ ಮಾಡುತ್ತಿರುವುದು ಜನತೆಯ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ನೋವಿನ ಜೊತೆಗೆ ಜನತೆ ಬೆಚ್ಚಿ ಬೀಳಲು ಪ್ರಮುಖ ಕಾರಣ, […]

Continue Reading

ಮಂಗಳೂರಿನಲ್ಲಿ ‘ಅಣಬೆ’ ಯಂತೆ ಮತ್ತೆ ಹುಟ್ಟಿಕೊಂಡ ಮಸಾಜ್ ಸೆಂಟರ್; ಏನುಂಟು ಏನಿಲ್ಲ.?

ಯುನಿಸೆಕ್ಸ್ ಹೆಸರಿನಲ್ಲಿ ನಡೆಯುತ್ತಿದೆ ಭರ್ಜರಿ ಚರ್ಮದಂಧೆ! ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಗಳು, ಇಸ್ಪೀಟ್ ಕ್ಲಬ್ ಗಳು, ವಿಡಿಯೋ ಗೇಮ್ ಗಳು ಭರ್ಜರಿ ಕಮಾಯಿ ಮಾಡುತ್ತಿದ್ದ ಕಾಲವೊಂದಿತ್ತು. ಎಲ್ಲವೂ ಸೆಟ್ಟಿಂಗ್ ಮೂಲಕ ನಡೆಯುತ್ತಿದ್ದವು. ಅಧಿಕಾರಿಗಳಿಗೆ ಮಂತ್ಲಿ ಕಪ್ಪ ಕಾಣಿಕೆ ಕೊಟ್ಟೇ ರಾಜಾರೋಷವಾಗಿ ನಡೆಯುತ್ತಿದ್ದವು. ಕೇರಳದ ಕಾಸರಗೋಡಿನಿಂದ ರೈಲು ಹತ್ತಿ ಮಸಾಜ್ ಸೆಂಟರ್ ಗೆ ಬಂದು ದೇಹ ತಣಿಸಿಕೊಂಡು ಹೋಗುತ್ತಿದ್ದರು. ಈ ಬಗ್ಗೆ ನಾಗರಿಕ ಸಂಘಟನೆಗಳ ಪ್ರತಿಭಟನೆಯಿಂದ ರಾಜಾರೋಷವಾಗಿ ನಡೆಯುತ್ತಿದ್ದ ಇಲ್ಲೀಗಲ್ ದಂಧೆಗೆ ಬ್ರೇಕ್ ಬಿದ್ದಿತ್ತು. ಆದರೆ ಇದೀಗ ಮತ್ತೆ […]

Continue Reading

ಕಂದಕಕ್ಕೆ ಪಲ್ಟಿ ಹೊಡೆದ ಕಾರು, ಮೂವರು ಸಾವು. ಪುತ್ತೂರು ಬಳಿ ಮುಂಜಾನೆ ನಡೆದ ಅಪಘಾತ.

ಪುತ್ತೂರು ಹೊರವಲಯದ ಪರ್ಲಡ್ಕ ಬೈಪಾಸ್ ರಸ್ತೆ ಬಳಿ ಇಂದು ಮುಂಜಾನೆ ಕಾರೊಂದು ಪಲ್ಟಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ. ಬೈಪಾಸ್ ರಸ್ತೆ ಬದಿಯ ಕಂದಕಕ್ಕೆ ಸುಳ್ಯ ಮೂಲದ ಮಾರುತಿ ಆಲ್ಟೋ ಕಾರು ಪಲ್ಟಿ ಹೊಡೆದಿದೆ. ಮೃತರನ್ನು ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ, ಚಿದಾನಂದ ನಾಯ್ಕ ಮತ್ತು ರಮೇಶ್ ನಾಯ್ಕ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ಬಳಿಕವಷ್ಟೇ ಲಭ್ಯವಾಗಬೇಕಾಗಿದೆ.

Continue Reading

ಅಂದು ಬೊಮ್ಮಾಯಿ.. ಇಂದು ಸಿದ್ದರಾಮಯ್ಯ

ಸ್ಪೀಕರ್ ಸಾಹೇಬ್ರ ಕ್ಷೇತ್ರದಲ್ಲಿ ಇದೆಂತಹ ತಾರತಮ್ಯ.? ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿ ಇದ್ದಾಗ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರ್, ಫಾಝೀಲ್ ಸುರತ್ಕಲ್, ಸುಳ್ಯದ ಯುವಕನೊಬ್ಬನ ಹತ್ಯೆ ನಡೆದಿತ್ತು. ನೆಟ್ಟಾರ್ ಮನೆಗೆ ಭೇಟಿ ನೀಡಿದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆಟ್ಟಾರ್ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಿಸಿತ್ತು. ಇಬ್ಬರು ಮುಸ್ಲಿಂ ಅಮಾಯಕ ಯುವಕರ ಕುಟುಂಬಕ್ಕೆ ಪರಿಹಾರ ಘೋಷಿಸಿ ಆ ನಂತರ ಹಿಂಪಡೆದಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಪಸಂಖ್ಯಾತ ವರ್ಗದ ಪಾಲಿಗೆ ಬೊಮ್ಮಾಯಿ ವಿಲನ್ ಆಗಿದ್ದರು. ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ […]

Continue Reading

ಭಗವಾನ್ ಬಾಹುಬಲಿ ಮೂರ್ತಿಯ ಭಾವಚಿತ್ರವನ್ನು ವಿಕೃತವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರವಾನೆ

ಧಾರ್ಮಿಕ ಅವಹೇಳನ ಅಡಿಯಲ್ಲಿ ಬೆಳ್ತಂಗಡಿಯ ವಿಜಯ ಎಂಬಾಕೆಯ ವಿರುದ್ಧ ದೂರು ದಾಖಲು ಜೈನ ಧರ್ಮೀಯರ ಆರಾದ್ಯ ದೇವರಾದ ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರವನ್ನು ವಿರೂಪಗೊಳಿಸಿ, ತನ್ನ ಫೇಸ್‌ಬುಕ್‌ ಖಾತೆ ಹಾಗೂ ವಾಟ್ಸಪ್‌ ಮೂಲಕ ಫೋಟೋವನ್ನು ಹರಿಯಬಿಟ್ಟಿದ್ದು ಜೈನ ಧರ್ಮಕ್ಕೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಎಂದು ಆರೋಪಿಸಿ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಕಲ್ಮಂಜ ನಿವಾಸಿ ಪಣಿರಾಜ್‌ ಎಂಬವರು ದೂರು ನೀಡಿದ್ದು, ನಾರಾವಿ ಗ್ರಾಮದ ವಿಜಯಾ ನಾರಾವಿ ಎಂಬಾಕೆ ಜೈನ ಧರ್ಮೀಯರ ಆರಾಧ್ಯ ದೇವರಾದ […]

Continue Reading

ಗ್ರಾಹಕ ಅಬೂಬಕ್ಕರ್ ಸಿದ್ದೀಕ್ ನ ನಕಲಿ ಚಿನ್ನಕ್ಕೆ ಅಸಲಿ ಸರ್ಟಿಫಿಕೇಟ್ ಕೊಟ್ಟ ಚಿನ್ನ ಪರೀಕ್ಷಕ ವಿವೇಕ್ ಆಚಾರ್ಯ.!

500 ನಕಲಿ ಚಿನ್ನದ ಬಳೆಗಳು..2 ಕೋಟಿ ಮಕ್ಮಲ್ ಟೋಪಿ.. ಪಡೀಲ್ ಸಮಾಜ ಸೇವಾ ಸಹಕಾರಿ ಸಂಘದ ಸ್ವಾಹಾ ಪುರಾಣ.! ವ್ಯಕ್ತಿಯೋರ್ವ ನಕಲಿ ಚಿನ್ನ ಅಡವಿಟ್ಟು ಎರಡು ಕೋಟಿಗೂ ಅಧಿಕ ರೂಪಾಯಿ ಸಾಲ ಪಡೆದು ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದೀಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದೀಕ್ 2,11,89,800 ರೂಪಾಯಿ ಸಾಲ ಪಡೆದು, ಮೋಸ […]

Continue Reading

ದ.ಕ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸೆನ್‌ (ಸೈಬರ್‌ ಕ್ರೈಂ) ಪೊಲೀಸ್‌ ಠಾಣೆಯು ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸೆನ್‌ (ಸೈಬರ್‌ ಕ್ರೈಂ) ಪೊಲೀಸ್‌ ಠಾಣೆಯು ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿದೆ. ಇದರಿಂದ ಜಿಲ್ಲೆಯ ಗ್ರಾಮಾಂತರ ಭಾಗದ ಜನತೆಗೆ ಸೈಬರ್ ಕ್ರೈಂ ಗೆ ಸಂಬಂಧ ಪಟ್ಟ ಪ್ರಕರಣಗಳ ಬಗ್ಗೆ ದೂರು ನೀಡಲು ಅನುಕೂಲವಾಗಲಿದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಹಳೆಯ ಕಟ್ಟಡವನ್ನು ನವೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರದೇಶದಲ್ಲಿ ಸೈಬರ್‌ ಕ್ರೈಮ್‌ ಪ್ರಕರಣಗಳು ನಡೆದರೂ ಸಂತ್ರಸ್ತರು […]

Continue Reading

ಆರು ಜನರ ತಂಡದಿಂದ ಯುವಕನ ಅಪಹರಿಸಿ ಮನಬಂದಂತೆ ಹಲ್ಲೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು.

ಗಾಯಾಳು ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲು. ಜಿಲ್ಲಾ ಎಸ್ಪಿಗೆ ದೂರು. ವಿಟ್ಲ : ವೈದ್ಯರ ಬಳಿ ಚಿಕಿತ್ಸೆಗೆ ಹೋಗುತ್ತಿದ್ದ ಆಟೋ ಚಾಲಕನನ್ನು ಕಬಕ ಬಳಿ ತಂಡವೊಂದು ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಬೋಳಂತೂರು ನಿವಾರಿಸಿ ರಹೀಂ ಯಾನೆ ಅಬ್ದುಲ್ ರಹಿಮಾನ್ ಎಂಬವರು ತಂಡದಿಂದ ಹಲ್ಲೆಗೊಂಡು ಆಸ್ಪತ್ರೆಗೆ ದಾಖಲಾದ ಆಟೋ ಚಾಲಕ. ತನ್ನ ಆಟೋದಲ್ಲಿ ಪುತ್ತೂರಿನ ವೈದ್ಯರಲ್ಲಿಗೆ ಚಿಕಿತ್ಸೆ ಪಡೆಯುವುದಕ್ಕಾಗಿ ಹೋಗುತ್ತಿದ್ದ ಸಂದರ್ಭ ಕುಕ್ಕರಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ಹಿಂದಿನಿಂದ ಮಾರುತಿ ಬ್ರೆಝಾ ಕಾರೊಂದು ಹಿಂಬಾಲಿಸಿತ್ತೆನ್ನಲಾಗಿದೆ‌. […]

Continue Reading

ಅನಿವಾಸಿ ಉದ್ಯಮಿ ಹಾಜಿ ಅಬ್ದುಲ್ ಸಲಾಂ ಕೊಲೆ ಪ್ರಕರಣ: ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ನ್ಯಾಯಾಲಯ

ಅನಿವಾಸಿ ಉದ್ಯಮಿ ಅಬ್ದುಲ್ ಸಲಾಂ ಹಾಜಿ ಕೊಲೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.50 ಲಕ್ಷ ರೂಪಾಯಿ ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಕಾಸರಗೋಡು ಮೊಗ್ರಾಲ್ ಪೆಟ್ಟಾಡಿ ಮೂಲೆಯ ನಿವಾಸಿ ಹಾಜಿ ಅಬ್ದುಲ್ ಸಲಾಂ ಅವರನ್ನು 2017 ಏಪ್ರಿಲ್ 30 ರಂದು ಮಾಲಿಯಂಗರ ಕೋಟೆ ಸಮೀಪ ಕೊಲೆಗೈಯ್ಯಲಾಗಿತ್ತು. ಅವರ ಜೊತೆಗಿದ್ದ ನೌಶಾದ್ ಎಂಬಾತ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದ. ಅಬ್ದುಲ್ ಸಲಾಂ ಜೊತೆಗಿದ್ದವರು ಸಿದ್ದೀಕ್ […]

Continue Reading