‘ಹೃದಯಾ ಸ್ತಂಭನಕ್ಕೆ ಕಾರಣವಾಗುತ್ತಿದೆಯಾ.. ಕೋವಿಡ್ ವ್ಯಾಕ್ಸಿನ್.? ICMR ವರದಿ ಏನು ಹೇಳುತ್ತಿದೆ.

ಕೊರೊನಾ ವೈರಸ್ ಅನ್ನು ತಡೆಯಲು ಸಿದ್ಧಪಡಿಸಿದ ಲಸಿಕೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸಿದೆಯೇ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇದೆ. ಈ ಕುರಿತಂತೆ ಐಸಿಎಂಆರ್ ಕೂಡ ಅಧ್ಯಯನ ನಡೆಸುತ್ತಿದ್ದು ವರದಿ ಜುಲೈ ಆರಂಭದಲ್ಲಿ ಬರಬಹುದು. ಈ ಅಧ್ಯಯನದಲ್ಲಿ ಕೋವಿಡ್ 19 ಲಸಿಕೆ ಮತ್ತು ದೇಶದ ಯುವ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ವ್ಯಾಕ್ಸಿನೇಷನ್ ನಂತರ ನೈಸರ್ಗಿಕ ಕಾರಣಗಳಿಂದ ಜನರು ಸಾವನ್ನಪ್ಪಿದ್ದಾರೆಯೇ ಅಥವಾ ಬಹುತೇಕರ ಸಾವಿಗೆ ಕೋವಿಡ್ ಲಸಿಕೆ ಕಾರಣವಾಯಿತೇ ಎಂಬುದನ್ನು ಕೂಲಂಕಷವಾಗಿ […]

Continue Reading

ಸ್ವಯಂಘೋಷಿತ ದೇವಮಾನವ ಪೂರ್ಣಾನಂದ ಸ್ವಾಮಿಯಿಂದ ಅಪ್ರಾಪ್ತ, ಅನಾಥ ಬಾಲಕಿಯ ಅತ್ಯಾಚಾರ.

ತನ್ನ ಆಶ್ರಮದಲ್ಲಿ ಅಪ್ರಾಪ್ತ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಶ್ರಮದ ಸ್ವಾಮೀಜಿಯನ್ನು ವಿಶಾಖಪಟ್ಟಣಂ ನಗರದ ಪೊಲೀಸರು ಬಂಧಿಸಿದ್ದಾರೆ. 15 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯ ಮೇಲೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ವೆಂಕೋಜಿಪಾಲೆಂನಲ್ಲಿರುವ ಸ್ವಾಮಿ ಜ್ಞಾನಾನಂದ ಹೆಸರಲ್ಲಿರುವ ಆಶ್ರಮ, ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಮುಖ್ಯಸ್ಥನಾದ ಸ್ವಾಮಿ ಪೂರ್ಣಾನಂದ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ದಶಕದ ಅವಧಿಯಲ್ಲಿ ಎರಡನೇ ಬಾರಿಗೆ ಈ ಸ್ವಾಮಿಯನ್ನು ಅತ್ಯಾಚಾರದ ಪ್ರಕರಣದಲ್ಲಿ […]

Continue Reading

ಬಹುದೊಡ್ಡ ಹಗರಣ: ಒಬ್ಬನೇ ಒಬ್ಬ ವೈದ್ಯನ ಹೆಸರಲ್ಲಿ 83 ಆಸ್ಪತ್ರೆಗಳ ನೋಂದಣಿ

ಹಗರಣಗಳು ಯಾವ ರೀತಿ ನಡೆಯುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಅದರಲ್ಲೂ ಬೆಚ್ಚಿಬೀಳಿಸುವಂತದ್ದು ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳ ಹೆಸರಿನಲ್ಲಿ ನಡೆದಂತವುಗಳು. ಪರವಾನಗಿ ನವೀಕರಣ ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ ಬಲು ದೊಡ್ಡ ಹಗರಣವೊಂದು ಬೆಳಕಿಗೆ ಬಂದಿದೆ. ಆಗ್ರಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ 449 ಸಂಸ್ಥೆಗಳಲ್ಲಿ ಸುಮಾರು 15 ವೈದ್ಯರು ಕಾನೂನುಬಾಹಿರವಾಗಿ  ಸೇವೆಗಳನ್ನು ಒದಗಿಸುತ್ತಿರುವುದು ಕಂಡುಬಂದಿದೆ.ಅವರಲ್ಲಿ ಒಬ್ಬ ವೈದ್ಯ ಮೀರತ್, ಕಾನ್ಪುರ ಮತ್ತು ಪಶ್ಚಿಮ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಬರೋಬ್ಬರಿ ಸುಮಾರು 83 ಆಸ್ಪತ್ರೆಗಳನ್ನು […]

Continue Reading

8,810.65 ಮಿಲಿಯನ್ 500 ರೂಪಾಯಿ ಮೌಲ್ಯದ ಹೊಸ ನೋಟುಗಳು ನಾಪತ್ತೆ..!

ನೋಟುಗಳು ಕಾಣೆ ರಾಷ್ಟ್ರೀಯ ಭದ್ರತೆಗೆ ಅಪಾಯ.ತನಿಖೆ ನಡೆಸುವಂತೆ ಕೇಂದ್ರ ಆರ್ಥಿಕ ಗುಪ್ತಚರ ಸಂಸ್ಥೆ,ಇಡಿಗೆ ಪತ್ರ ದೇಶಾದ್ಯಂತ 2000 ರೂ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಮಾನ್ಯ ಮಾಡಿ ಹಿಂದಕ್ಕೆ ಪಡೆಯುವ ಆದೇಶ ಮಾಡಿದ ಬೆನ್ನಲ್ಲೇ ದೇಶದಲ್ಲಿ ಗರಿಷ್ಠ ಮೌಲ್ಯದ ನೋಟಾಗಿ ಉಳಿದಿರುವ 500 ಮುಖಬೆಲೆಯ ಸುಮಾರು 8,810.65 ಮಿಲಿಯನ್ ನೋಟುಗಳೇ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಆರ್ ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದು, ದೇಶದ ಮೂರು ವಿವಿಧ ನೋಟು ಮುದ್ರಣಾಲಯದಲ್ಲಿ ಮುದ್ರಿಸಲಾದ 500 ರೂ […]

Continue Reading

ಎಐಎಡಿಎಂಕೆ, ಬಿಜೆಪಿ ಸಂಬಂಧದಲ್ಲಿ ಬಿರುಕು, ಅಣ್ಣಾಮಲೈ ವಿರುದ್ಧ ಹರಿಹಾಯ್ದ ಪಳನಿಸ್ವಾಮಿ

ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಮಲೈ ದುರುದ್ದೇಶದಿಂದ ಅಪಪ್ರಚಾರ ಮಾಡಿದ್ದಾರೆ.ಜಯಲಲಿತಾ ಕುರಿತ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಪಳನಿಸ್ವಾಮಿ, “ಅಣ್ಣಾಮಲೈ ಅವರ ಹೇಳಿಕೆಯು ಬೇಜವಾಬ್ದಾರಿಯಾಗಿದೆ, ರಾಜಕೀಯ ಅನುಭವ ಮತ್ತು ಪ್ರಬುದ್ಧತೆಯ ಕೊರತೆಯಿದೆ. ನಾವು ಅದನ್ನು ಬಲವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.ಕ್ರಾಂತಿಕಾರಿ ನಾಯಕಿ ಮತ್ತು ಇಧಯ ದೈವಂ (ಜಯಲಲಿತಾ ಅವರನ್ನು ಅವರ ಅನುಯಾಯಿಗಳು ಪ್ರೀತಿಯಿಂದ ಕರೆಯುವ ಹೃದಯದ ದೇವತೆ) ಖ್ಯಾತಿಗೆ ಯೋಜಿತ ರೀತಿಯಲ್ಲಿ ಕಳಂಕ ತಂದಿದ್ದಕ್ಕಾಗಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು ಬಿಜೆಪಿ ಮುಖ್ಯಸ್ಥರ ವಿರುದ್ಧ ನಿರ್ಣಯವನ್ನು […]

Continue Reading

ಸಾಚಾ’ ಮುಖವಾಡ ತೊಟ್ಟವರ ಹೇಸಿಗೆ ಕೆಲಸಗಳಿವು.!

ಬಾಬಾ ರಾಮದೇವ್ ಮಾಲೀಕತ್ವದ ‘ಪತಂಜಲಿ ಫುಡ್ಸ್’.ಜಿಲ್ಲೆಯ ಜನರ ಬದುಕನ್ನು ಮೂರಾಬಟ್ಟೆಯಾಗಿಸಿದೆ ಮಂಗಳೂರು ಧಾರ್ಮಿಕವಾಗಿ ಉತ್ಕೃಷ್ಟ ಶ್ರೇಣಿಯಲ್ಲಿರುವ ಪ್ರದೇಶ. ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳ ತವರೂರು ಜೊತೆಗೆ ಮತೀಯ ಕಾರಣಕ್ಕಾಗಿ ರಾಜ್ಯದಲ್ಲಿಯೇ ಹೆಚ್ಚು ಸುದ್ದಿಯಾಗುತ್ತಿರುವ ಪ್ರದೇಶ ಕೂಡ ಹೌದು. ಧಾರ್ಮಿಕ ತ್ಯಾಜ್ಯವನ್ನು ತುಳುನಾಡಿನ ಜನರ ಮನಸ್ಸುಗಳಿಗೆ ತುಂಬಿ ಅವರನ್ನು ಧಾರ್ಮಿಕ ಭ್ರಾಂತರನ್ನಾಗಿ ಮಾಡಿದ ನಂತರ ಇದೀಗ ಕೆಲವೊಂದು ರಾಜಕೀಯ ಬೆಂಬಲಿತ ಕಾರ್ಪೊರೇಟ್ ಜಗತ್ತು ಕರಾವಳಿಯನ್ನು, ನದಿಗಳನ್ನು ಹಾಗೂ ಇಲ್ಲಿನ ಒಟ್ಟು ಬದುಕನ್ನು ವ್ಯವಸ್ಥಿತವಾಗಿ ತನ್ನ ಹತೋಟಿಗೆ ಪಡೆಯುವಲ್ಲಿ ಕಾರ್ಯನಿರತವಾಗಿದೆ. […]

Continue Reading

ದಲಿತರ ಪ್ರವೇಶಕ್ಕೆ ನಿರಾಕರಿಸಿದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್‌ ದೇವಾಲಯಕ್ಕೆ ಬೀಗ ಮುದ್ರೆ

ದಲಿತರ ಪ್ರವೇಶಕ್ಕೆ ನಿರಾಕರಿಸಿದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್‌ ದೇವಾಲಯಕ್ಕೆ ಸರ್ಕಾರ ಬುಧವಾರ ಬೀಗ ಮುದ್ರೆ ಹಾಕಿದೆ.ಗ್ರಾಮದಲ್ಲಿ ವಣ್ಣಿಯಾರ್ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಈ ದೇಗುಲವು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದು, ಏಪ್ರಿಲ್‌ನಲ್ಲಿ ನಡೆದ ಹಬ್ಬದ ಸಂದರ್ಭದಲ್ಲಿ ದಲಿತರು ಪೂಜೆ ಸಲ್ಲಿಸಲು ತೆರಳಿದ್ದಾಗ ವಣ್ಣಿಯಾರ್‌ ಮುಖಂಡರು ಅಡ್ಡಿಪಡಿಸಿದ್ದರಿಂದ ಘರ್ಷಣೆ ಸಂಭವಿಸಿತ್ತು. ದಲಿತರ ಮನವಿ ಮೇರೆಗೆ ಜಿಲ್ಲಾಡಳಿತವು ಎರಡು ಸಮುದಾಯಗಳ ನಡುವೆ ಹಲವು ಸುತ್ತಿನ ಶಾಂತಿ ಸಭೆ […]

Continue Reading

ಹೆಣ್ಣಿನ ಅರೆನಗ್ನ ದೇಹ ಪ್ರದರ್ಶನ ಪ್ರಮಾದವಲ್ಲ: ಕೇರಳ ಹೈಕೋರ್ಟ್

ಮಹಿಳಾ ಹಕ್ಕುಗಳ ಕಾರ್ಯಕರ್ತೆ,ಕೇರಳ ಮೂಲದ ರೆಹಾನಾ ಫಾತಿಮಾ ವಿರುದ್ಧದ ಪೋಕ್ಸೊ ಪ್ರಕರಣವನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.ಮಹಿಳೆ ತನ್ನ ದೇಹದ ಕುರಿತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಶಕ್ತಳು. ಅದು ಆಕೆಯ ಸಮಾನತೆ ಹಾಗೂ ಖಾಸಗಿತನದ ಮೂಲಭೂತ ಹಕ್ಕು. ನಗ್ನತೆ ಹಾಗೂ ಲೈಂಗಿಕತೆಯನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿ ನ್ಯಾಯಾಲಯ ಮೊಕದ್ದಮೆಯನ್ನು ವಜಾಗೊಳಿಸಿದೆ. 37ರ ಹರೆಯದ ಫಾತಿಮಾಳ ಅರೆ ನಗ್ನ ದೇಹದ ಮೇಲೆ ಆಕೆಯ ಅಪ್ರಾಪ್ತ ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೊ 2020 ರಲ್ಲಿ ವೈರಲ್ ಆದ ನಂತರ […]

Continue Reading

ಮಹಿಳೆಯರು ನಾಗಾಸಾಧು ಆಗುವ ಪ್ರಕ್ರಿಯೆಯೇ ಬಹಳ ವಿಚಿತ್ರ.! ನಿಗೂಢ ಲೋಕದ ವಿಸ್ಮಯಕಾರಿ ವಿಚಾರ

ಹಿಂದೂ ಧರ್ಮದಲ್ಲಿ ಪುರುಷ ನಾಗಾ ಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದಾರೆ. ಋಷಿಗಳು ಮತ್ತು ಸಂತರ ಈ ಭ್ರಾತೃತ್ವವು ಬಹಳ ಕಠಿಣ ತಪಸ್ಸು ಮಾಡುತ್ತಾರೆ ಮತ್ತು ಅವರ ಜೀವನವು ತುಂಬಾ ನಿಗೂಢವಾಗಿದೆ. ಸ್ತ್ರೀ ನಾಗಾ ಸಾಧುಗಳ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಅಂಶ ಭಸ್ಮ, ರುದ್ರಾಕ್ಷ ಮಣಿ, ಉದ್ದನೆಯ ವಸ್ತ್ರಗಳನ್ನು ಮೈಮೇಲೆ ಇಟ್ಟುಕೊಂಡು ನಿಗೂಢವಾಗಿ ಕಾಣುವ ನಾಗಾ ಸಾಧುಗಳ ಲೋಕವೂ ಅವರಂತೆಯೇ ನಿಗೂಢ. ಆದರೆ, ಗಂಡು ಮತ್ತು ಹೆಣ್ಣು ನಾಗಾ ಸಾಧುಗಳಂತೆ ಹೆಣ್ಣು ನಾಗಾ ಸಾಧುಗಳೂ ಇದ್ದಾರೆ ಎಂಬುದು […]

Continue Reading

ಕೇವಲ ‘ಗೋ’ಮಾಂಸವನ್ನು ಹೊಂದುವುದು, ಗೋ ಉತ್ಪನ್ನ ಮಾರಾಟ ಅಪರಾಧ ಅಲ್ಲ; ಅಲಹಾಬಾದ್ ಹೈಕೋರ್ಟ್

ಮಾಂಸವನ್ನು ಹೊಂದುವುದು ಅಥವಾ ಸಾಗಿಸುವುದು, ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟ ಅಥವಾ ಸಾಗಣೆಯನ್ನು ಗೋಹತ್ಯೆ ಕಾಯಿದೆಯಡಿಯಲ್ಲಿ ಶಿಕ್ಷಾರ್ಹವೆಂದು ಪರಿಗಣಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪಿಲಿಭಿತ್‌ನ ಪುರನ್‌ಪುರ ಪ್ರದೇಶದ ಇಬ್ರಾನ್ ಅಲಿಯಾಸ್ ಶೇರು ಜಾಮೀನು ಅರ್ಜಿ ಕುರಿತಂತೆ ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾಣ್ ಈ ಆದೇಶ ನೀಡಿದ್ದಾರೆ. ಅಲ್ಲದೆ ವಶಪಡಿಸಿಕೊಂಡ ವಸ್ತು ಗೋಮಾಂಸ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇಬ್ರಾನ್ ಯಾನೆ ಶೇರು ಪೇಂಟರ್ ವೃತ್ತಿಗಾರನಾಗಿದ್ದು,ದಾಳಿ ನಡೆಸಿದ ವೇಳೆ ಆತನು ಮನೆಯಲ್ಲಿ […]

Continue Reading