ಸಿಂಗಾರಿ ಬೀಡಿ ಮಾಲಿಕನ ಮನೆಗೆ ತಡರಾತ್ರಿಯಲ್ಲಿ ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು.

ಎರಡೂವರೆ ಗಂಟೆಗಳ ಕಾಲ ತಪಾಸಣೆ ನಾಟಕ. ಮೂಟೆಗಟ್ಟಲೆ ನಗದು ಹಣ, ಮೊಬೈಲ್ ಹೊತ್ತೊಯ್ದ ಖದೀಮರು. ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಪ್ರಸಿದ್ಧ ಬೀಡಿ ಉದ್ಯಮಿ ಸಿಂಗಾರಿ ಹಾಜಿ ಸುಲೈಮಾನ್ ರವರ ಮನೆಯಲ್ಲಿ ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ನಡೆಸಿದ್ದಾರೆ. ಶುಕ್ರವಾರ ರಾತ್ರಿ ಎಂಟೂವರೆ ಗಂಟೆಗೆ ತಮಿಳುನಾಡು ನೋಂದಣಿಯ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಬಂದ ಏಳು ಜನರ ತಂಡ ವ್ಯವಸ್ಥಿತವಾಗಿ ದರೋಡೆ ನಡೆಸಿ ಪರಾರಿಯಾಗಿದೆ. ಹಿಂದಿ, ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಮಾತನಾಡುವ […]

Continue Reading

ಆಸ್ತಿ ವರ್ಗಾವಣೆ ಹಕ್ಕು ರದ್ದುಪಡಿಸುವಂತೆ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಹೊರತು ಮಕ್ಕಳಿಗಲ್ಲ: ಹೈಕೋರ್ಟ್

ಪೋಷಕರ ನಿರ್ವಹಣೆ, ಕಲ್ಯಾಣ ಹಾಗೂ ಹಿರಿಯ ನಾಗರಿಕರ ಕಾಯ್ದೆ-2007ರ ಕಲಂ 16ರಡಿ ಆಸ್ತಿ ವರ್ಗಾವಣೆ ಹಕ್ಕು ರದ್ದುಪಡಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಮಾತ್ರ ಇದೆಯೇ ಹೊರತು ಮಕ್ಕಳಿಗಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಇದೇ ಮೊದಲ ಬಾರಿಗೆ ಈ ದಿಸೆಯಲ್ಲಿ ಮಹತ್ವದ ತೀರ್ಪೊಂದನ್ನು ನೀಡಿದೆ. ಈ ಸಂಬಂಧ ನಗರದ ಪಿ.ಕೃಷ್ಣ ಮತ್ತು ಅವರ ಮಕ್ಕಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ಅರ್ಜಿದಾರರು ಬೇಕಿದ್ದರೆ […]

Continue Reading

ರಂಗಭೂಮಿ ರಂಗ ಶಿಕ್ಷಣ ಮಕ್ಕಳ ನಾಟಕೋತ್ಸವ ಸಮಾರೋಪ

ರಂಗ ಶಿಕ್ಷಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ : ಡಾ.ಜೀವನ್‌ರಾಂ ಸುಳ್ಯ ಉಡುಪಿ : ನಾಟಕ, ಯಕ್ಷಗಾನ, ನೃತ್ಯ ಮೊದಲಾದ ಕಲಾ ಕೌಶಲಗಳನ್ನು ಮಕ್ಕಳಿಗೆ ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂಬ ಆತಂಕ ಪಡುವುದು ಅಗತ್ಯವಿಲ್ಲ. ರಂಗ ಶಿಕ್ಷಣ ಮಕ್ಕಳ ಪ್ರಗತಿಗೆ ಪೂರಕವಾಗಲಿದೆ ಎಂಬುದನ್ನು ಹೆತ್ತವರು ಅರಿತುಕೊಳ್ಳಬೇಕು ಎಂದು ಖ್ಯಾತ ರಂಗ ಕರ್ಮಿ ಡಾ.ಜೀವನರಾಮ್ ಸುಳ್ಯ ಹೇಳಿದರು. ಅವರು ರಂಗಭೂಮಿ ಉಡುಪಿ ವತಿಯಿಂದ ಹಮ್ಮಿಕೊಂಡ ಶಾಲಾ ಮಕ್ಕಳಿಗೆ ರಂಗ ಶಿಕ್ಷಣ ಅಭಿಯಾನದ ಅಂಗವಾಗಿ ಎಂಜಿಎo ಕಾಲೇಜಿನ […]

Continue Reading

ಖತರ್ನಾಕ್ ಲೇಡಿ..ಪೊಲೀಸನನ್ನೇ ಹನಿಟ್ರ್ಯಾಪ್ ಗೆ ಕೆಡವಿ 8 ಲಕ್ಷ ಬಾಚಿದ ಸುರಸುಂದರಾಂಗಿ..!

ಪೊಲೀಸರನ್ನೇ ಹನಿ ಟ್ರ್ಯಾಪ್ ಖೆಡ್ಡಾಗೆ ಕೆಡವಿದ ಖತರ್ನಾಕ ಮಹಿಳೆ. ಬರೊಬ್ಬರಿ 8 ಲಕ್ಷ ರೂ. ಹಣ ವಸೂಲು ಮಾಡಿದಆರೋಪಿ ಮಹಿಳೆ ಕಾಟಕ್ಕೆ ಬೇಸತ್ತು ಕಾನ್ಸಟೇಬಲ್‌ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಹಿಂದೆ ಕಲಬುರಗಿಯಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಈ ಪೂಜಾ ಭಾಗಿಯಾಗಿದ್ದಳು. ಸಾಮಾನ್ಯವಾಗಿ ಉದ್ಯಮಿ ಗಳು,ರಾಜಕಾರಣಿಗಳು, ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಖತರ್ನಾಕ್ ಮಹಿಳೆ ಪೊಲೀಸ್ ಕಾನ್ಸಟೇಬಲ್‌ ಒಬ್ಬರನ್ನು ಹನಿ ಟ್ರ್ಯಾಪ್ ಖೆಡ್ಡಾಗೆ ಖೆಡವಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ಕಲಬುರಗಿಯ ಸೆನ್ […]

Continue Reading

ದೂರು ನೀಡಲು ಬಂದ ಮಹಿಳೆಗೆ ಡಿವೈಎಸ್ಪಿಯಿಂದ ಲೈಂಗಿಕ ದೌರ್ಜನ್ಯ; ವೀಡಿಯೊ ವೈರಲ್

ದೂರು ನೀಡಲು ಬಂದ ಮಹಿಳೆಯೊಂದಿಗೆ ಡಿವೈಎಸ್ಪಿ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಎಂಬುವವರು ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು ಮಹಿಳೆಯೊಬ್ಬರು ಅವರ ಕಚೇರಿಗೆ ಬಂದಿದ್ದರು. ಈ ವೇಳೆ ಕಚೇರಿಯ ವಿಶ್ರಾಂತಿ ಕೊಠಡಿಗೆ ಕರೆದೊಯ್ದು ಅನೈತಿಕ ಚಟುವಟಿಕೆ ನಡೆಸಿದ್ದಾರೆ ಎನ್ನಲಾಗಿದೆ. ಡಿವೈಎಸ್ಪಿ ರಾಮಚಂದ್ರಪ್ಪನವರು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ವಿಡಿಯೋವೊಂದನ್ನು ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಇದೀಗ ಅಧಿಕಾರಿಯ […]

Continue Reading

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಅನ್ನುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್

ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಹುದ್ದೆಗೆ ತೀವ್ರ ಚರ್ಚೆ ನಡೀತಿದೆ. ಇನ್ನು ಈ ಎರಡೂ ಪಕ್ಷಗಳಲ್ಲಿ ರಾಜ್ಯಾದ್ಯಕ್ಷ ಸ್ಥಾನಕ್ಕೆ ಚಟುವಟಿಕೆ ನಡೀತಿರೋ ಬೆನ್ನಲ್ಲೇ , ಸದ್ಯ ಕಾಂಗ್ರೆಸ್ ನಲ್ಲೂ ಇಂಥದ್ದೇ ಚರ್ಚೆ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಅಂತ ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂತದ್ದೊಂದು ಚರ್ಚೆ ಹುಟ್ಟುಹಾಕುವಂತೆ ಮಾಡಿದ್ದಾರೆ. ಒಬ್ಬರೇ ಎರಡೆರಡು ಹುದ್ದೆಯಲ್ಲಿದ್ದರೆ ತಮ್ಮ ಜವಾಬ್ದಾರಿ ನಿಭಾಯಿಸೋದು ಕಷ್ಟ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲೇಬೇಕು ಅನ್ನೋದು ಎಲ್ಲರ ಅಭಿಪ್ರಾಯ […]

Continue Reading

ಕರಾವಳಿಯ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದ ಹೃದಯವಂತ ಶಿಕ್ಷಕ

ಕಣ್ಣೀರ ನಡುವೆಯಲ್ಲೂ ಮೊಂಟೆಪದವು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಕಾರ್ಯಕ್ಕೆ ಮಿಡಿಯಿತು ಹೃದಯಗಳು.! ಶಿಕ್ಷಕರು ಎಂದರೆ ಕೇವಲ ಮಕ್ಕಳ ಭವಿಷ್ಯ ರೂಪಿಸುವವರಲ್ಲ, ಬದಲಾಗಿ ಮಾನವೀಯತೆಯ ಜೊತೆಗೆ ಅಕ್ಷರ ಜ್ಞಾನದ ಮೂಲಕ ಶಿಕ್ಷಣ ನೀಡುವ ಮಹಾನ್ ವ್ಯಕ್ತಿಗಳು. ಮೊನ್ನೆ ಮಂಜನಾಡಿ ಗ್ಯಾಸ್ ದುರಂತದಲ್ಲಿ ಮರಣ ಹೊಂದಿದ ಇಬ್ಬರು ಶಾಲಾ ಬಾಲಕಿಯರು, ಮತ್ತು ಚೇತರಿಸಿಕೊಳ್ಳುತ್ತಿರುವ ಒಂದು ಪುಟಾಣಿ ಇದೇ ಮೊಂಟೆಪದವು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ಮೂವರೂ 14, 12, 9 ವರ್ಷದ ಹೆಣ್ಣು ಮಕ್ಕಳು. ಇವರು ಗ್ಯಾಸ್ ದುರಂತ ಸಂಭವಿಸಿದ […]

Continue Reading

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಮೂವರು ಪ್ರಭಾವಿಗಳ ಕಣ್ಣು.! ಮುಂದಿನ ರಾಜ್ಯಾಧ್ಯಕ್ಷ ಯಾರಾಗಲಿದ್ದಾರೆ.?

ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರ ಅಧಿಕಾರದ ಅವಧಿ ಸದ್ಯದಲ್ಲೇ ಮುಗಿಯಲಿದ್ದು, ಈ ಸ್ಥಾನಕ್ಕೆ ಮೂವರು ಪ್ರಭಾವಿಗಳು ಕಣ್ಣಿಟ್ಟಿದ್ದಾರೆ. ಮುಂದಿನ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲವಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅವಧಿ ವಿಸ್ತರಿಸಲು ಬಯಸುತ್ತಿದ್ದಾರೆ. ಆದರೆ ಅವರ ಮೇಲೆ ಕೆಲವು ನಾಯಕರು ಈಗಾಗಲೇ ಬಂಡಾಯವೆದ್ದಿದ್ದಾರೆ. ಹೀಗಾಗಿ ಮತ್ತೆ ಅವರನ್ನೇ ಮುಂದುವರಿಸಿದರೆ ಈ ನಾಯಕರ ಆಕ್ರೋಶ ಹೆಚ್ಚಾಗುವುದು ಖಚಿತ. ಈ ಹಿನ್ನಲೆಯಲ್ಲಿ ವಿಜಯೇಂದ್ರ ವಿಚಾರದಲ್ಲಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ. ಆದರೆ ಅಷ್ಟು ಸುಲಭವಾಗಿ ರಾಜ್ಯ ಬಿಜೆಪಿ ಚುಕ್ಕಾಣಿ ತಮ್ಮ […]

Continue Reading

ನರ್ಸ್ ನಿಮಿಷಾ ಪ್ರಿಯಾಗೆ ಮರಣ ದಂಡನೆ ಶಿಕ್ಷೆ; ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆ.! ಆಘಾತಕ್ಕೊಳಗಾಗಿರುವ ಕುಟುಂಬ; ರಕ್ಷಣೆಗೆ ಮೊರೆ.

ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಿರುವ ಎಲ್ಲಾ ಸಹಾಯಗಳನ್ನು ನೀಡುವುದಾಗಿ ಭಾರತ ಭರವಸೆ ನೀಡಿದೆ. ಯೆಮೆನ್ ಪ್ರಜೆಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ನಿಮಿಷಾ ಪ್ರಿಯಾ ಅವರಿಗೆ ನೀಡಿರುವ ಮರಣದಂಡನೆಯ ಶಿಕ್ಷೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಇತ್ತೀಚೆಗೆ ಅಂಗೀಕರಿಸಿದ್ದಾರೆ. ಒಂದು ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆಗಳಿರುವುದರಿಂದ ಆಘಾತಕ್ಕೊಳಗಾಗಿರುವ ಕುಟುಂಬ ಅವರ ರಕ್ಷಣೆಗೆ ಮೊರೆ ಇಟ್ಟಿದೆ. ಮಗಳನ್ನು ಮರಣದಂಡನೆ ಶಿಕ್ಷೆಯಿಂದ ಪಾರು […]

Continue Reading

ಗುರುಪುರ ಪಲ್ಘುಣಿ ನದಿಯಲ್ಲಿ ಅಕ್ರಮ ಮರಳು ದಂಧೆ: ರಾಷ್ಟ್ರಪ್ರೇಮಿ ಮುಖಂಡರದ್ದೇ ಕಾರ್ಬಾರು.!

ಪ್ರಭಾವಿ ಗುತ್ತಿಗೆದಾರನ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟಿಗೆ ಹರಿದು ಬರುತ್ತಿದೆ ದಿನನಿತ್ಯ ನೂರಾರು ಲೋಡ್ ಅಕ್ರಮ ಮರಳು .! ಗ್ರಾಮ ಪಂಚಾಯತ್, ಪೊಲೀಸ್, ಗಣಿ, ಕಂದಾಯ ಇಲಾಖೆಯನ್ನೇ ಬಾಯಿಮುಚ್ಚಿಸಿದ ಕರಾಮತ್ತಾದರೂ ಏನು.? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿ ವರ್ಗ ಸಂಪೂರ್ಣ ವಿಫಲವಾಗಿದೆ. ಸರಕಾರದ ಅಧಿಕೃತ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆದು ಪ್ರಭಾವಿಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ರಚಿಸಿ ಅಧಿಕಾರಿ ವರ್ಗಕ್ಕೆ ‘ಮಾಮೂಲಿ’ ಸಂದಾಯ ಮಾಡಿ ಮರಳನ್ನು ದೋಚುತ್ತಿದ್ದಾರೆ. […]

Continue Reading