ರಾಜ್ಯಮಟ್ಟದ ಕಬಡ್ಡಿ ಆಟಗಾರ ನಡುಮನೆ ಪ್ರೀತಂ ಶೆಟ್ಟಿ ಹೃದಯಾಘಾತದಿಂದ ನಿಧನ.

ಕಾರ್ಕಳ ಮುಟ್ಲುಪಾಡಿ,‌ ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26) ಶುಕ್ರವಾರ(ಡಿ.13) ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ.ಶುಕ್ರವಾರ ಮಂಡ್ಯದಲ್ಲಿ ನಡೆಯುತ್ತಿದ್ದ ಕಬಡ್ಡಿಯಲ್ಲಿ ಭಾಗವಹಿಸಿದ್ದ ಪ್ರೀತಂಗೆ ಆಟವಾಡುತ್ತಿದ್ದಾಗ‌ಲೇ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಹೃದಯಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮೃತರು ತಾಯಿ ಮತ್ತು ಸಹೋದರನ ಜೊತೆಗೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಚಿಕ್ಕಂದಿನಿಂದಲೇ ಕಬಡ್ಡಿ ಆಟವನ್ನು ಮೆಚ್ಚಿಕೊಂಡಿದ್ಜ ಪ್ರೀತಂ ತನ್ನ ಸಾಧನೆಯಿಂದಲೇ ಉತ್ತುಂಗ ಶಿಖರವನ್ನೇರಿದ್ದರು ಎಂಬುದನ್ನು ಸ್ನೇಹಿತರು ಖಚಿತಪಡಿಸಿದ್ದಾರೆ. ಪ್ರೀತಂ ಶೆಟ್ಟಿಯವರು ಸಾಯಿರಾಂ […]

Continue Reading

ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ; ಆರೋಪಿಗಳ ಜಾಮೀನು ಅರ್ಜಿ ತಿರಸ್ಕ್ರತ.

ವಿಶೇಷ ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ ‘ಕಜೆ ಲಾ ಛೇಂಬರ್ಸ್’ ಮುಖ್ಯಸ್ಥರಾದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಪುತ್ತೂರು: ನವೆಂಬರ್ 6 ರ ತಡರಾತ್ರಿ ಪುತ್ತೂರಿನ ನೆಹರೂ ನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಒಂದನೇ ಮತ್ತು ಎರಡನೇ ಆರೋಪಿಗಳಾದ ಚೇತನ್ ಅಲಿಯಾಸ್ ಪುಂಡಿ ಚೇತು ಹಾಗೂ ಮನೀಷ್ ಅಲಿಯಾಸ್ ಬ್ರೋಕರ್ ಮನಿ ಎಂಬವರು ಮಾನ್ಯ ಪುತ್ತೂರು‌ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. […]

Continue Reading

ಮುಂಬೈಯಿಂದ ಮಂಗಳೂರಿನ ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ: ಉಡುಪಿಯ ಅಖಿಲೇಶ್ ಖಾಕಿ ಬಲೆಗೆ

ಮಂಗಳೂರು ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಡ್ರಗ್ ಪೆಡ್ಲರ್ ಖಾಕಿ ಬಲೆಗೆ ಬಿದ್ದಿದ್ದಾನೆ. ಮುಂಬೈಯಿಂದ ಮಂಗಳೂರು ನಗರಕ್ಕೆ ಗಾಂಜಾವನ್ನು ಸಾಗಾಟ ಮಾತ್ತು ಮಾರಾಟ ಮಾಡುತ್ತಿದ್ದ ಉಡುಪಿಯ ಅಂಬಲಪಾಡಿ ನಿವಾಸಿ ಅಖಿಲೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮೂಲ್ಕಿಯ ಬಪ್ಪನಾಡು ಪರಿಸರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಮಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿ ಅಖಿಲೇಶ್ ನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ 1,62,000 ರೂ ಮೌಲ್ಯದ 6.7 ಕೆಜಿ ಗಾಂಜಾ, […]

Continue Reading

ಆನೆ ಕೊಲ್ಲಲು ಅನುಮತಿ ಕೇಳಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ; ಅರಣ್ಯ ಮಂತ್ರಿ ಖಂಡ್ರೆ ಕೆಂಡಾಮಂಡಲ.!

ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಶಾಸಕರಿಗೆ ನೀತಿಪಾಠ ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆ ಆಗುತ್ತಿದ್ದು, ಆನೆಗಳನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಕೆಂಡಾಮಂಡಲರಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಅವರು, ರಾಜ್ಯ ಸರ್ಕಾರ ಆನೆಗಳ ಹಾವಳಿ ತಡೆಗೆ ಕಳೆದ 2 ವರ್ಷಗಳಲ್ಲಿ 489.46 ಮೀ. ಸೌರಬೇಲಿ, […]

Continue Reading

ಮದ್ಯದ ನಶೆಯಲ್ಲಿ ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ. ವಿಟ್ಲ ಸಮೀಪದ ಪುಣಚ ಬಳಿ ಪತಿರಾಯನ ರಾಕ್ಷಸೀ ಕೃತ್ಯ.

ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಸಮೀಪದ ದೇವಿನಗರ ನಿವಾಸಿ ಲೀಲಾ ನಾಯ್ಕ(45)ಮೃತ ದುರ್ದೈವಿ.ಪ್ರತಿನಿತ್ಯ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಗಲಾಟೆ ನಡೆಸುವುದು ಪತಿ ಸಂಜೀವ ನಾಯ್ಕನ ಚಟವಾಗಿತ್ತು. ಎಂದಿನಂತೆಯೇ ಬುಧವಾರದಂದು ಕೂಡಾ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಕಾಲು ಕೆರೆದು ಜಗಳವಾಡಿದ್ದಾನೆ. ಜಗಳ ಮುಂದುವರಿದು ಪತ್ನಿ ಲೀಲಾಳ ಮೇಲೆ ಸಂಜೀವ ಮನಬಂದಂತೆ ಥಳಿಸಿ ಸಲಾಕೆಯ ಭರ್ಚಿಯಿಂದ ಹಲ್ಲೆ ಗೈದು ಪರಿಣಾಮ ಲೀಲಾ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಸ್ಥಳೀಯರು ಗಾಯಾಳುವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ […]

Continue Reading

ಉಳ್ಳಾಲ: ಕಲ್ಕಟ್ಟ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ: ಗಂಭೀರ ಗಾಯಗೊಂಡಿದ್ದ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಉಳ್ಳಾಲ ತಾಲೂಕಿನ ಮಂಜನಾಡಿ ಕಲ್ಕಟ್ಟ ಮನೆಯಲ್ಲಿ ಡಿಸೆಂಬರ್ 7 ರಂದು ಮನೆಯ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಮಲಗಿದ್ದ ತಾಯಿ ಹಾಗೂ ಮೂವರು ಮಕ್ಕಳು ಗಂಭೀರ ಗಾಯಗೊಂಡು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಖುಬ್ರಾ ಮೃತಪಟ್ಟಿದ್ದಾರೆ. ಮೂವರು ಮಕ್ಕಳಾದ ಮೆಹದಿಯಾ, ಮಝಿಯಾ, ಮಾಯಿದಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಲಿಂಡರ್ ಸ್ಪೋಟಗೊಂಡು ಇವರ ಚರ್ಮ ಬೆಂದು ಹೋಗಿರುವುದಾಗಿ ತಿಳಿದು ಬಂದಿದೆ.

Continue Reading

ಪುಂಜಾಲಕಟ್ಟೆ: ಪಿಕಪ್‌ ವಾಹನ ಕಳವು ಪ್ರಕರಣ : ಆರೋಪಿಗಳು ಅಂದರ್

ಪುಂಜಾಲಕಟ್ಟೆ ಇಂಟರ್ ಲಾಕ್ ಪ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಬೊಲೆರೋ ಪಿಕಪ್ ಗೂಡ್ಸ್ ವಾಹನ ಕಳವು ಪ್ರಕರಣದ ಆರೋಪಿಗಳನ್ನು ಪುಂಜಾಲಕಟ್ಟೆ ಎಸ್.ಐ‌.ನಂದಕುಮಾರ್ ನೇತ್ರತ್ವದ ತಂಡ ವಶಪಡಿಸಿಕೊಂಡ ಘಟನೆ ನಡೆದಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಅರ್ತಿಲ ಎಂಬಲ್ಲಿರುವ TIYARA ಇಂಟರ್‌ಲಾಕ್‌ ಫ್ಯಾಕ್ಟರಿಯ ಮಾಲಿಕರಾದ ಟೆರೆನ್ಸ್ ಜೋಶೆಲ್ ವೇಗಸ್ ರವರ KA19D5858 ನೇ ಬೊಲೆರೋ ಪಿಕಪ್‌ ಗೂಡ್ಸ್‌ ವಾಹನವನ್ನು ಡಿ. 2 ರಂದು ಫ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಿದ್ದ ಸಮಯ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, , ಈ […]

Continue Reading

ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿ ಹೊಸ ಕೇಸು ದಾಖಲಿಸುವಂತಿಲ್ಲ. ಸುಪ್ರೀಂ ಕೋರ್ಟ್

ಆಗಸ್ಟ್ 15, 1947 ರಂದು ಇದ್ದಂತೆ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಬದಲಾಗದೆ ಉಳಿಯುತ್ತದೆ ಎಂದು ಪೂಜಾ ಸ್ಥಳಗಳ ಕಾಯಿದೆಯು ಸೂಚಿಸುತ್ತದೆ. 1991 ರ ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಉತ್ತರ ಬರುವವರೆಗೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ ಎಂದು ಕೋರ್ಟ್​ ಹೇಳಿದೆ. ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪ್ರಕರಣವನ್ನು […]

Continue Reading

ಕೂಡ್ಲಿಗಿ: ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ ಕಲ್ಪಿಸಿದ ಶಾಸಕ ಡಾ. ಎನ್. ಟಿ. ಶ್ರೀನಿವಾಸ್

ಕೂಡ್ಲಿಗಿ ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ, ಪಿಯುಸಿ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತ ಬೆಳಗಾವಿಯ ಸುವರ್ಣ ಸೌಧದಲ್ಲಿ, ಜರುಗುತ್ತಿರುವ ಚಳಿಗಾಲದ ಅಧಿವೇಶನವನ್ನು ಖುದ್ದು ನೇರವಾಗಿ ವೀಕ್ಷಿಸುವ ಸುವರ್ಣಾವಕಾಶವನ್ನು, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ಕಲ್ಪಿಸಿ ಕೊಟ್ಟಿದ್ದಾರೆ. ಶಾಸಕರು ಒಟ್ಟು 200 ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಧಿವೇಶನ ಆರಂಭಗೊಂಡ ಎರಡನೇ ದಿನವಾದ, ಡಿಸೆಂಬರ್10ರಂದು ಕೂಡ್ಲಿಗಿಯ ಸ.ಸಂ.ಪ.ಪೂ.ಕಾಲೇಜಿನ ಪಿಯುಸಿ ತರಗತಿಯ 54 ವಿದ್ಯಾರ್ಥಿಗಳು. ಸುವರ್ಣ ಸೌಧದಲ್ಲಿ ಜರುಗುವ ಅಧಿವೇಶನವನ್ನು, ಖುದ್ದು ವೀಕ್ಷಿಸಿ ಕಣ್ತುಂಬಿಸಿಕೊಂಡಿದ್ದಾರೆ. ಅಧಿವೇಶನ […]

Continue Reading

ಅಧಿಕಾರ ರಾಜಕಾರಣಕ್ಕಿಂತ ತತ್ವ ಸಿದ್ಧಾಂತದ ಬದ್ಧತೆ ಹೊಂದಿರುವ ಡೈನಾಮಿಕ್ ರಾಜಕಾರಣಿ ಬಿ. ಕೆ ಹರಿಪ್ರಸಾದ್

ಮುಚ್ಚುಮರೆಯಿಲ್ಲದೆ ಹುಳುಕುಗಳನ್ನು ತೆರೆದಿಡುವ ಗಟ್ಟಿ ಧ್ವನಿಯ ಏಕೈಕ ನಾಯಕ ಕರಾವಳಿಯ ಕೋಮು ರಾಜಕಾರಣ ಕೊನೆಯಾಗಬೇಕಾದರೆ ಬಿ. ಕೆ ಹರಿಪ್ರಸಾದ್ ಉಸ್ತುವಾರಿ ಮಂತ್ರಿಯಾಗಲಿ ಸಣ್ಣ ಪುಟ್ಟ ಅಧಿಕಾರಕ್ಕಾಗಿ ತತ್ವ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟು ಬಕೆಟ್ ಹಿಡಿಯುವ ಅದೆಷ್ಟೋ ರಾಜಕಾರಣಿಗಳನ್ನು ನಾವು ಕಂಡಿದ್ದೇವೆ. ಅಂತಹುದರಲ್ಲಿ ಅಧಿಕಾರ, ರಾಜಕಾರಣಕ್ಕಿಂತ ತತ್ವ ಸಿದ್ಧಾಂತವೇ ಮೇಲು ಅನ್ನುತ್ತಾ ಇದೇ ಕಾರಣದಿಂದ ಮಂತ್ರಿಯಾಗುವ ಭಾಗ್ಯ ಕಳೆದುಕೊಂಡ ಈ ಕಾಲಘಟ್ಟದ ಏಕೈಕ ರಾಜಕಾರಣಿಯಿದ್ದರೆ ಅದು ಬಿ. ಕೆ ಹರಿಪ್ರಸಾದ್ ಮಾತ್ರ ಅನ್ನುವುದು ಸುಳ್ಳಲ್ಲ. ಕಾಂಗ್ರೆಸ್ ಪಕ್ಷದ […]

Continue Reading