ಬಜಪೆ ಚತುಷ್ಪಥ ರಸ್ತೆ ಕಾಮಗಾರಿ; ಕಳಪೆ ಮತ್ತು ಅವೈಜ್ಞಾನಿಕ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸೆತ್ತು ಹೋರಾಟಕ್ಕೆ ಧುಮುಕಿದ ನಾಗರೀಕರು

ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆಯು ಚತುಷ್ಪಥ ರಸ್ತೆಯ ನಕಾಶೆ ಸಿದ್ದವಾಗಿದ್ದರೂ ಅದನ್ನು ಸಮರ್ಪಕವಾಗಿ ಮುಂದುವರಿಸದೆ ಜನತೆಗೆ ವಂಚಿಸಿದ್ದು, ಮಾತ್ರವಲ್ಲ ನಿರ್ಮಾಣವಾಗಿರುವ ರಸ್ತೆ ಕಳಪೆ ಕಾಮಗಾರಿಕೆಯಿಂದ ಕೂಡಿರುವುದು ಸ್ಥಳೀಯ ನಾಗರೀಕರನ್ನು ಕೆರಳಿಸಿದೆ. ಬಜಪೆ ಪಟ್ಟಣ ಪಂಚಾಯತ್ ಆಗಿ ಪರಿವರ್ತನೆ ಆದ ನಂತರ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದೆ. ಈ ಸಮಸ್ಯೆಗಳ ಬಗ್ಗೆ ಹಲವಾರು ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಹಲವು ಬಾರಿ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. […]

Continue Reading

ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಮಹಾತ್ಮಾ ಗಾಂಧಿ ಜಯಂತಿ ಆಚರಣೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮ ಜಯಂತಿಯು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಾಷ್ಟ್ರಪಿತ ಬಾಪೂಜಿಯವರನ್ನು ಸ್ಮರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಗೌರಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಅವರು ಮಹಾತ್ಮ ಗಾಂಧೀಜಿ ಇಲ್ಲದ ಭಾರತವನ್ನು ಊಹಿಸಲು ಸಾಧ್ಯವಿಲ್ಲ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ಹಾದಿಯಲ್ಲಿ ಎಂಥಹ ಬಲಾಡ್ಯರನ್ನು ಸೋಲಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟರು ಸ್ವತಂತ್ರ ಭಾರತದಲ್ಲಿ ಹಿಂದೂ ಮುಸ್ಲಿಂ […]

Continue Reading

ಹೆಣ ಬೇಕಾ.. ಹಣ ಕೊಡಿ: ಇಂಡಿಯಾನ.ಹೆಣ ಬಿಡಲ್ಲ.. ಹಣ ಕೊಡಲ್ಲ: ಡಿವೈಎಪ್ಐ.

ಡಿವೈಎಫ್ಐ ನಡೆಗೆ ಬೆಚ್ಚಿದ ಆಸ್ಪತ್ರೆ ಮಂಡಳಿ ಪರಿಶಿಷ್ಟ ಜಾತಿಗೆ ಸೇರಿದ ಮೂಡಬಿದ್ರೆಯ ಮಹಾಬಲ ಎನ್ನುವವರು ಉಸಿರಾಟದ ಸಮಸ್ಯೆಯಿಂದ ಕಳೆದ ಮೂರು ದಿನಗಳ ಹಿಂದೆ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಒಳರೋಗಿಯಾಗಿ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರ ತಂಡ ಹೃದಯದಲ್ಲಿ ಸಮಸ್ಯೆಯಿದೆ, ಬೈಪಾಸ್ ಸರ್ಜರಿ ಮಾಡಬೇಕಾಗುತ್ತದೆ ಅನ್ನುವ ವೈದ್ಯರ ತೀರ್ಮಾನದಂತೆ, ಸರ್ಜರಿ ನಂತರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದರು. ಖಾಸಗಿ ಆಸ್ಪತ್ರೆಗಳ ದಂಧೆ ಕೂಡ ಅದೇ ರೀತಿಯದ್ದು. ಬದುಕಿದರೂ ದುಡ್ಡು ಕೊಡಬೇಕು, ಸತ್ತರೂ ಕೊಡಬೇಕು. […]

Continue Reading

ಹರ್ಷವರ್ಧನ ಭಟ್ಟರನ್ನು ರಕ್ಷಿಸಿದ ಮುಸ್ಲಿಂ ಯುವಕರು; ಮಾನವೀಯತೆಗೆ ಸಾಕ್ಷಿಯಾದ ಬಂಟ್ವಾಳ

ತಾನು ಸಂಚರಿಸುತ್ತಿದ್ದ ಬೈಕ್ ಅಕಸ್ಮಿಕವಾಗಿ ಬೆಳಗಿನ ಜಾವ ಸೇತುವೆಗೆ ಡಿಕ್ಕಿ ಹೊಡೆದು 40 ಅಡಿ ಆಳದ ಹೊಳೆಗೆ ಬಿದ್ದು ಒದ್ದಾಡುತ್ತಿದ್ದ ಸವಾರ ಪಾಕತಜ್ಞರೊಬ್ಬರನ್ನು ಮುಸ್ಲಿಂ ಯುವಕರು ರಕ್ಷಿಸಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಕೊಡುಂಗಾಯಿ ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ. ಕೊಡುಂಗಾಯಿ ಮಂಕುಡೆ ನಿವಾಸಿ ಹರ್ಷವರ್ಧನ ಭಟ್ ಪ್ರಾಣಾಪಾಯದಿಂದ ಪಾರಾದವರು. ಶನಿವಾರ ಬೆಳಗ್ಗಿನ ಜಾವಾ ಸರಿ ಸುಮಾರು 4 ಗಂಟೆ ವೇಳೆಗೆ ಪಾಕತಜ್ಞ ಹರ್ಷವರ್ಧನ ಭಟ್ ಕಾರ್ಯನಿಮಿತ್ತ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಕಸ್ಮಿಕವಾಗಿ […]

Continue Reading

ಬಜಪೆ ಪೊಲೀಸರ ಸಾಧನೆ; ಕುಖ್ಯಾತ ಕಳ್ಳರನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ವಶ

ಬಜಪೆ: ಬಜಪೆ ಪೊಲೀಸ್ ಠಾಣೆಯ ಉಪ-ನಿರೀಕ್ಷಕ ಗುರಪ್ಪ ಕಾಂತಿ ರವರ ನೇತ್ರತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಪಣಂಬೂರಿನ ಕುದುರೆಮುಖ ಜಂಕ್ಷನ್ KIOCL ಬಸ್ಸು ನಿಲ್ದಾಣದ ಬಳಿ ಸುರತ್ಕಲ್ ಬೊಕ್ಕಬೆಟ್ಟು ನಿವಾಸಿ ಅಬ್ಬಾಸ್ ಎಂಬವ ಮಗ ತೌಸೀಫ್ ಅಹಮ್ಮದ್ ಮತ್ತು ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಅಯ್ಯೂಬ್ ಎಂಬವರ ಮಗ ಮೊಹಮ್ಮದ್ ಫರಾಜ್ ಎಂಬವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಮನೆ ಕಳವು ಪ್ರಕರಣಗಳಾದ ಮಂಗಳೂರು ತಾಲೂಕಿನ ಅಡ್ಡೂರು […]

Continue Reading

ಜಿ.ಆರ್ ಮೆಡಿಕಲ್ ಕಾಲೇಜು ಬಗ್ಗೆ ಹೈಕೋರ್ಟ್ ಗರಂ: ವಿದ್ಯಾರ್ಥಿಗಳಿಗೆ ಇತರ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಅಲಾಟ್ ಮಾಡಲು ಹೈಕೋರ್ಟ್ ಮಹತ್ವದ ಆದೇಶ

ಮಂಗಳೂರು ಹೊರವಲಯದ ನೀರುಮಾರ್ಗ ಜಿ ಆರ್ ಮೆಡಿಕಲ್ ಕಾಲೇಜು ಮಾನ್ಯತೆ ರದ್ದುಪಡಿಸಿರುವುದರಿಂದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನೆಲೆಯಲ್ಲಿ 24 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು ಜಿ ಆರ್ ಮೆಡಿಕಲ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಕಾಲೇಜಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಪಡಿಸಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ವೈದ್ಯಕೀಯ ಆಯೋಗದ ಪತ್ರವನ್ನೇ ನಕಲು ಮಾಡಿ 150 ವಿದ್ಯಾರ್ಥಿಗಳಿಗೆ ಲಕ್ಷಾಂತರ ಶುಲ್ಕ ಪೀಕಿಸಿ […]

Continue Reading

ಗ್ರಾ.ಪಂ. ಸದಸ್ಯನ ಮನೆಯಲ್ಲಿ ಕಳವು ಪ್ರಕರಣ: 6 ಮಂದಿಯ ಬಂಧನ; ಜಬ್ಬಾರ್ ಹತ್ಯೆಯ ಆರೋಪಿ ಪೆರೋಲ್ ಮೇಲೆ ಬಂದು ದರೋಡೆ

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6ಮಂದಿಯನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ. ಬಡಗನ್ನೂರು ಗ್ರಾಮಪಂಚಾಯತ್ ನ ಮಾಜಿ ಸದಸ್ಯರಾಗಿರುವ ಗುರುಪ್ರಸಾದ್ ರೈ ಅವರ ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ದರೋಡೆಕೋರರ ತಂಡವೊಂದು ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ ಮಾಡಿರುವ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುಧೀರ್ ಪೆರುವಾಯಿ, ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಾದ ಪಚ್ಚಂಬಳ ರವಿ, ಕಿರಣ್, ವಸಂತ, ಫಸಲ್, ನಿಝಾರ್ […]

Continue Reading

ಬೆಳ್ತಂಗಡಿ ಪೊಲೀಸರ ಸಾಧನೆ; ಚಿನ್ನಾಭರಣ ಸಹಿತ ಕುಖ್ಯಾತ ಕಳ್ಳನ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ಹೊರ ರಾಜ್ಯಗಳಲ್ಲಿ ಕಳವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ನಟೋರಿಯಸ್ ಕಳ್ಳನನ್ನು, ಉಜಿರೆ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಅಗತೀಶ್ವರಂ ನಿವಾಸಿ ಉಮೇಶ್ ಯಾನೆ ಉಮೇಶ್ ಬಳೆಗಾರ ಎಂಬಾತನೇ ಬಂಧನಕ್ಕೊಳಗಾದ ಆರೋಪಿ. 2023 ಆ.12 ರಂದು ಉಜಿರೆ ಅಜಿತ್ ನಗರದ ಕಲ್ಲೆ ನಿವಾಸಿ ಫೆಲಿಕ್ಸ್ ರೋಡಿಗ್ರಸ್ ಅವರ ಮನೆಯಲ್ಲಿ ಹಗಲಿನ ಹೊತ್ತು ಯಾರು ಇಲ್ಲದ ವೇಳೆ ಹಿಂಬಾಗಿಲ ಚಿಲಕ […]

Continue Reading

ವಾರದೊಳಗೆ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು: ಸಚಿವ ಡಾ. ಎಂ.ಸಿ. ಸುಧಾಕರ್

ಬೆಂಗಳೂರು: ಒಂದು ವಾರದೊಳಗೆ 2021ರಲ್ಲಿ ಆರಂಭಗೊಂಡ 1242ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಪ್ರಕ್ರಿಯೆಯನ್ನು ಆರಂಭಿಸಿ, ಡಿಸೆಂಬರ್ ಅಂತ್ಯದೊಳಗೆ ಆದೇಶ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಹೇಳಿದರು. ಗುರುವಾರ ನಗರದ ಸಚಿವರ ನಿವಾಸದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ 150ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಬಳಗದ ವತಿಯಿಂದ ಮನವಿ ಮಾಡಿದ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೆಎಟಿಯಿಂದ ತೀರ್ಪು ಪ್ರಕಟವಾಗಿದೆ. ಸರ್ಕಾರದ ಸುತ್ತೋಲೆಯ ಪರವಾಗಿ ಜಯವಾಗಿದೆ. ತೀರ್ಪನ್ನು ಸ್ವಾಗತಿಸುತ್ತೇನೆ. ಇನ್ನೂ ಸಿಸಿಬಿ ವರದಿಯ […]

Continue Reading

ಗಾಂಜಾ ಮಾರಾಟ ಜಾಲದ ತಂಡವನ್ನು ಖೆಡ್ಡಕ್ಕೆ ಕೆಡವಿದ ಮೂಡಬಿದ್ರೆ ಪೊಲೀಸರ ತಂಡ

ಮೂಡಬಿದ್ರೆ ಬೆಳುವಾಯಿ ಗ್ರಾಮದ ಕಾಂತಾವರ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ದ್ವಿಚಕ್ರ ವಾಹನದಲ್ಲಿಟ್ಟು, ನಿಷೇಧಿತ ಡ್ರಗ್ಸ್ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಯುವಕರ ತಂಡವನ್ನು ಮೂಡಬಿದ್ರಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ರವರ ನೇತ್ರತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೂಡಬಿದ್ರೆ ಬೆಳುವಾಯಿ ಗ್ರಾಮದ ನಿವಾಸಿಗಳಾದ, ಮಹಮ್ಮದ್ ಅಯಾನ್,ಪರ್ಹಾನ್ ಖಾನ್, ಮಹಮ್ಮದ್ ಜುಬೈರ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 800 ಗ್ರಾಂ. ತೂಕದ ನಿಷೇದಿತ ಗಾಂಜಾ,ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಪ್ರಕರಣದಲ್ಲಿ ಇನ್ನೂ ಹಲವಾರು […]

Continue Reading