ಶೈಕ್ಷಣಿಕ ಕಾಶಿ ಮೂಡಬಿದ್ರೆಗೆ ಸಿಂಗಂ ಸಂದೇಶ್. ಮೂಡುಬಿದಿರೆಯಲ್ಲಿ ಕಮಾಲ್ ತೋರಿಸುತ್ತರಾ ಸಂದೇಶ್.

ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಖಡಕ್, ದಕ್ಷ ಪೊಲೀಸ್ ಅಧಿಕಾರಿಗಳನ್ನು ನೋಡಿದ್ದೇವೆ. ತಮ್ಮ ಖಡಕ್ ಶೈಲಿಯಿಂದಲೇ ರಾಜಕಾರಣಿಗಳ ಕೆಂಗಣ್ಣಿಗೆ ಒಳಗಾಗಿ ವರ್ಗಾವಣೆಗೊಂಡು ಹೋದದ್ದಿದೆ. ಆದರೆ ಜನಸಾಮಾನ್ಯರು ಈಗಲೂ ಅಂತಹ ಅಧಿಕಾರಿಗಳ ಸೇವೆಯನ್ನು ಕೊಂಡಾಡುತ್ತಲೇ ಇರುತ್ತಾರೆ. ಏನಾದರೂ ಅನಾಹುತ ಸಂಭವಿಸಿದಾಗ ಅವರು ಇರಬೇಕಿತ್ತು, ಅವರು ಇರುತ್ತಿದ್ದರೆ ಬೆನ್ನುಮೂಳೆ ಮುರಿದು ಬಿಡುತ್ತಿದ್ದರು ಎಂದು ನೆನಪಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಸೂಪರ್ ಕಾಫ್ ಅಧಿಕಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನೋಡಿದ್ದು ಕಡಿಮೆ. ರಾಜಕಾರಣಿಗಳ, ಅಧಿಕಾರಿಗಳ ತಾಳಕ್ಕೆ ಕುಣಿಯುವವರನ್ನು […]

Continue Reading

ಜಿಲ್ಲೆಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಯಾವ ಪುರುಷಾರ್ಥಕ್ಕೆ..? ನಿಲ್ಲದ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು

ಮೂಡಬಿದ್ರೆಯಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ನಾಯಕನ ಮೇಲೆಯೇ ಅನೈತಿಕ ಪೊಲೀಸ್ ಗಿರಿ.! ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅನೈತಿಕ ಪೊಲೀಸ್ ಗಿರಿಯನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರ ಆ್ಯಂಟಿ ಕಮ್ಯುನಲ್ ವಿಂಗ್ ಅನ್ನು ಸ್ಥಾಪಿಸಿತ್ತು.ಆದರೆ ಆನಂತರವಾದರೂ ಅನೈತಿಕ ಪೊಲೀಸ್ ಗಿರಿ ಗೆ ಬ್ರೇಕ್ ಬಿದ್ದಿದ್ದಿಯಾ? ದಾಖಲೆಗಳು ಇಲ್ಲ ಅನ್ನುತ್ತಿದ್ದೆ. ಕಳೆದ ಎರಡು ತಿಂಗಳಿದೀಚೆಗೆ ಕರಾವಳಿಯಲ್ಲಿ ಹತ್ತಾರು ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ನಡೆದಿದೆ.ಯಾವುದೇ ವಿಂಗ್ ಬಂದರೂ ಸಮಾಜ ವಿದ್ರೋಹಿಗಳಿಗೆ ಭಯವೇ ಇಲ್ಲದಂತಾಗಿದೆ. ಇದೀಗ ಆ್ಯಂಟಿ […]

Continue Reading

ಪಂಚರಂಗಿ ಕಂಡಕ್ಟರ್ ನ ಅಸಲಿ ಮುಖ.. ಮೆಸ್ಸೇಜ್ ಕಳುಹಿಸಿ ಧರ್ಮದೇಟು ತಿಂದ ಧರ್ಮ ರಕ್ಷಕ.!

ನಿನ್ನೆಯಷ್ಟೇ ಗುರುಪುರ ಕೈಕಂಬ ಬಳಿಯ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು, ಸ್ಥಳೀಯರ ಮಧ್ಯೆಯೇ ಯುವಕನೊಬ್ಬ ಬಸ್ಸನ್ನು ತಡೆದು ಪಂಚರಂಗಿಯೊಬ್ಬನಿಗೆ ತಪರಾಕಿ ಹಾಕುವ ವಿಡಿಯೋ ವೊಂದು ವೈರಲ್ ಆಗಿತ್ತು. ಗಡ್ಡಧಾರಿ ಬಸ್ ಕಂಡಕ್ಟರ್ ಗೆ ವಾಚಾಮಗೋಚರವಾಗಿ ಬೈಯ್ಯುವ,ಪಂಚರಂಗಿ ಬಸ್ ಕಂಡಕ್ಟರ್ ತುಟಿಕ್ ಪಿಟಿಕ್ ಎನ್ನದೆ ಇರುವ ವಿಡಿಯೋ ಇದಾಗಿತ್ತು. ಅಸಲಿಗೆ ಜನನಿಬಿಡ ಪ್ರದೇಶದಲ್ಲಿಯೇ ಭಜರಂಗಿ ಕಂಡಕ್ಟರ್ ಗೆ ಯುವಕನೊಬ್ಬ ಸಖತ್ ಶಾಸ್ತಿ ಮಾಡುವ ಹಿಂದೆ ಆತನ ಪತ್ನಿಗೆ ಅಶ್ಲೀಲ ಮೆಸ್ಸೇಜ್ ಕಳುಹಿಸಿದ್ದು ಕಾರಣವಾಗಿತ್ತು‌.! ಅನ್ಯಕೋಮಿನ ವಿವಾಹಿತ ಮಹಿಳೆಯೊಬ್ಬಳಿಗೆ ಪಂಚರಂಗಿ ಕಂಡಕ್ಟರ್ […]

Continue Reading

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ,ಕಾರು ಸಮೇತ ಇಬ್ಬರು ಆರೋಪಿಗಳ ಬಂಧನ

ಬಡಗ ಎಡಪದವು ನಿವಾಸಿ ಚಂದ್ರ ಗೌಡ ಎಂಬವರ ಮೇಯಲು ಬಿಟ್ಟ ಮೂರು ದನಗಳನ್ನು ದಿನಾಂಕ 15.08.2023 ರಂದು ಮಧ್ಯರಾತ್ರಿ ದೂಮಚಡವು ಎಂಬಲ್ಲಿಂದ ಆರೋಪಿಗಳು ಕಳವು ಮಾಡಿ,ಹಿಂಸಾತ್ಮಕವಾಗಿ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದು, ಈ ದೃಶ್ಯವಳಿಗಳು ಸಿಸಿ ಕ್ಯಾಮಾರದಲ್ಲಿ ರೆಕಾರ್ಡ್ ಆಗಿ, ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು. ಈ ಪ್ರಕರಣದ ಪತ್ತೆಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಸೂಚನೆಯಂತೆ ಕಾರ್ಯಚರಣೆ ನಡೆಸಿದ ಬಜಪೆ ಪೊಲೀಸರು ದಿನಾಂಕ: 19-08-2023 ರಂದು ಶಾಂತಿಗುಡ್ಡೆ ಬಳಿ ಕೃತ್ಯಕ್ಕೆ ಬಳಸಿದ 5 ಲಕ್ಷ ಮೌಲ್ಯದ […]

Continue Reading

ಮಂಗಳೂರು: ಅಕ್ರಮ ಮರಳುಗಾರಿಕೆ ಅಡ್ಡೆಗೆ ಪೊಲೀಸ್ ದಾಳಿ; ಕೊಟ್ಯಾಂತರ ರೂಪಾಯಿ ಮೌಲ್ಯದ ಸೊತ್ತು ವಶ; ಆರೋಪಿಗಳು ಪರಾರಿ

ಉಳಾಯಿಬೆಟ್ಟು ಸಮೀಪದ ಇಡ್ಮಾದ ಬಳಿ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮತ್ತು ಸಾಗಾಟವನ್ನು ಪತ್ತೆ ಹಚ್ಚಿರುವ ಎಸಿಪಿ ಧನ್ಯಾ ಎನ್.ನಾಯಕ್ ನೇತ್ರತ್ವದ ಪೊಲೀಸ್ ತಂಡ ಕೋಟ್ಯಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಾಯಿಬೆಟ್ಟುವಿನ ಇಡ್ಮಾದ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅನ್ನುವ ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ಎನ್ ನಾಯಕ್ ನೇತೃತ್ವದ ತಂಡದೊಂದಿಗೆ ಕಂಕನಾಡಿ ಗ್ರಾಮಾಂತರ ಪೊಲೀಸರು ಮತ್ತು ಸ್ಥಳೀಯ ಪಂಚಾಯಿತಿ ಅಧಿಕಾರಿ ದಾಳಿ ನಡೆಸಿದಾಗ ಇಲಾಖಾ […]

Continue Reading

ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನಗೊಂಡ ಭೂಮಿಗೆ ಪರಿಹಾರ ನೀಡುವಲ್ಲಿ ವಿಳಂಬ: ಆ.22ರಂದು ಪ್ರತಿಭಟನೆಗೆ ನಿರ್ಧಾರ

ಮಂಗಳೂರಿನ ನಂತೂರಿನಿಂದ ಮೂಡಬಿದ್ರೆವರೆಗೆ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಗೊಂಡ ಭೂಮಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಎನ್ ಎಚ್169 ಭೂ ಮಾಲಕರ ಹೋರಾಟ ಸಮಿತಿ ಆ. 22ರಂದು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆಗೆ ನಿರ್ಧರಿಸಿದೆ. ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ 2016ರಿಂದ ನಮ್ಮ ಭೂಮಿ ಸರಕಾರದ ಕೈಯ್ಯಲ್ಲಿದೆ. 2020ರಿಂದ ಭೂ ಪರಿಹಾರ ನೀಡುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಇನ್ನೂ ಪರಿಹಾರ ದೊರಕಿಲ್ಲ. ಅದಕ್ಕಾಗಿ 20 ಗ್ರಾಮಗಳ […]

Continue Reading

ಸೌಜನ್ಯ ಪ್ರಕರಣ ಮರು ತನಿಖೆ ಆಗಲ್ಲ,ಸರ್ಕಾರ ಏನು ಮಾಡಲು ಆಗಲ್ಲ:ಗೃಹ ಸಚಿವ, ಜಿ.ಪರಮೇಶ್ವರ್

ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,ಪ್ರಕರಣ ಕಾನೂನಾತ್ಮಕವಾಗಿ ಪೂರ್ಣಗೊಂಡಿದ್ದು, ಮರುತನಿಖೆ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಪರ, ವಿರೋಧ ಇದ್ದೇ ಇರುತ್ತದೆ. ಸೌಜನ್ಯ ಈ ಪ್ರಕರಣ ಮುಗಿದು ಹೋಗಿದ್ದು ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಮರು ತನಿಖೆ ವಿಚಾರ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.

Continue Reading

ಬಂಟ್ವಾಳದಲ್ಲೂ ಕಮ್ಯೂನಿಟಿ ಸೆಂಟರ್ ಯಶಸ್ಸಾಗಲಿ: ಕೆ.ಎಂ.ಟಿ. ಸಿಇಒ ಅಬ್ದುಲ್ ರಝಾಕ್

ಬಂಟ್ವಾಳ: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ ಮಾತ್ರಕ್ಕೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ವಿದ್ಯಾರ್ಥಿ ವೇತನ ನೀಡುವುದರ ಜೊತೆಗೆ ವಿದ್ಯಾರ್ಥಿ ಸಮೂಹಕ್ಕೆ ಸರಿಯಾದ ಶೈಕ್ಷಣಿಕ ಮಾರ್ಗದರ್ಶನ, ತರಬೇತಿ, ಶಿಕ್ಷಣದ ಮೌಲ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು, ಜೊತೆಗೆ ಸಾಮಾಜಿಕ ಕಳಕಲಿ ಬೆಳೆಸುವ ಪ್ರಯತ್ನ ಆಗಬೇಕಿದೆ ಎಂದು ಸೌದಿ ಅರೇಬಿಯಾ ಜುಬೈಲ್ ನ ಕೆ.ಎಂ.ಟಿ. ಇದರ ಸಿಇಒ ಅಬ್ದುಲ್ ರಝಾಕ್ ಅಭಿಪ್ರಾಯಪಟ್ಟರು. ಬಂಟ್ವಾಳ ಕಮ್ಯೂನಿಟಿ ಸೆಂಟರ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದ […]

Continue Reading

ಜಾತ್ರೆ ವ್ಯಾಪಾರಿಗಳಿಗೆ ಸಮಾನ ಅವಕಾಶ ನೀಡಿ,ಸೂಕ್ತ ಭದ್ರತೆ ಒದಗಿಸಬೇಕು. ಬದುಕುವ ಹಕ್ಕಿನ ಮೇಲೆ ಧಾಳಿ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ವ ಧರ್ಮ ಕ್ಷೇತ್ರಗಳ ಜಾತ್ರೆ ಆಯನ,ಉತ್ಸವ, ಉರೂಸ್ ಹಾಗೂ ಇತರೆ ಧಾರ್ಮಿಕ ಕಾರ್ಯ ಕ್ರಮಗಳ ಸಂಧರ್ಭದಲ್ಲಿ ಸಂತೆ ವ್ಯಾಪಾರ ಮಾಡುವ ಸಂತೆ ವ್ಯಾಪಾರಿಗಳ ನಡುವೆ ಕೋಮು ದ್ವೇಷ ಹರಡಲು ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಗಳನ್ನು ಹಾಕಿ ಕೋಮು ಸಂಘರ್ಷ ಸೃಷ್ಟಿ ಮಾಡುವ ಕೀಳು ಮಟ್ಟದ ರಾಜಕಾರಣ ಉಭಯ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಇದರಿಂದಾಗಿ ಕಳೆದ 30-40 ವರ್ಷಗಳಿಂದ ಜಾತ್ರೆ ಉತ್ಸವ ಉರೂಸ್ ಗಳಲ್ಲಿ ಸಂತೆ ವ್ಯಾಪಾರವನ್ನು ಮಾಡಿಕೊಂಡು […]

Continue Reading

ಗಂಜಿಮಠ ಹೈಡ್ರಾಮಾ: ಪಟಾಕಿ ಖರೀದಿಸಿ ವಿಜಯೋತ್ಸವಕ್ಕೆ ಮುಂದಾದವರಿಗೆ ಶಾಕ್..!

ಡಿಕೆಶಿ ಆಪ್ತ ಇನಾಯತ್ ಅಲಿಯ ಕನಕಪುರ ಪ್ರಯೋಗಕ್ಕೆ ಬೆಚ್ಚಿಬಿದ್ದ ಬಿಜೆಪಿ..ಅಲ್ಲಿ ನಡೆದಿತ್ತು ರಣರೋಚಕ ಗೇಮ್ ಪ್ಲ್ಯಾನ್..! ಗುರುಪುರ ಬ್ಲಾಕ್ ವ್ಯಾಪ್ತಿಯಲ್ಲಿ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದ್ದಂತೆ ಫೀನಿಕ್ಸ್ ನಂತೆ ಕಾಂಗ್ರೆಸ್ ಪಕ್ಷವನ್ನು ಅಪ್ಪಿ ಹಿಡಿದಿದೆ ಗಂಜಿಮಠ ಗ್ರಾಮ ಪಂಚಾಯತ್. ಪಕ್ಷ ಅಧಿಕಾರದಲ್ಲಿರುವಾಗ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಗಟ್ಟಿ ಸಾಕ್ಷಿ ಗಂಜಿಮಠ ಗ್ರಾಮ ಪಂಚಾಯತ್. ಪಟಾಕಿ ಖರೀದಿಸಿ ವಿಜಯೋತ್ಸವಕ್ಕೆ ಮುಂದಾಗಿದ್ದ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಗುಪ್ತ […]

Continue Reading