ಅಬ್ಬಬ್ಬಾ.. ಇದು ಮಂಗಳೂರು.. ತಲೆ ಎತ್ತಿದೆ ಅಕ್ರಮ ಮಸಾಜ್, ಸೆಂಟರ್’ಗಳು.! ಹೊರಗೆ ಸಲೂನ್.. ಒಳಗಡೆ.?

ಬಾಂಬೆ, ಕಲ್ಕತ್ತಾ, ಬೆಂಗಳೂರು ನಂತಹ ಮಾಯಾನಗರಿಯಲ್ಲಿ ತಲೆ ಎತ್ತಿ ಕಾರ್ಯಾಚರಿಸುತ್ತಿದ್ದ ಅಕ್ರಮ ಮಸಾಜ್ ಸೆಂಟರ್ ಗಳು ಇದೀಗ ಸೈಲೆಂಟಾಗಿಯೇ ಮಂಗಳೂರಿಗೂ ವಕ್ಕರಿಸಿದೆ.ಮಂಗಳೂರು ನಗರ ಬೆಳೆದಂತೆ ಅನೇಕ ಅಕ್ರಮ, ಅನೈತಿಕ ‌ಚಟುವಟಿಕೆಗಳು ಸಹ ಹೆಚ್ಚಾಗಿದೆ. ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ ಹೆಸರಿನಲ್ಲಿ ಮಸಾಜ್ ಸೆಂಟರ್ ಗಳು ನಗರದ ಹಲವೆಡೆ ನಡೆಯುತ್ತಿದೆ.  ಮೆಲ್ನೋಟಕ್ಕೆ ಅದೊಂದು ಮಜ್ ಬೂತಾದ ಕಟ್ಟಡ. ಒಳಹೊಕ್ಕರೆ ಹೆಣ್ಣು ಗಂಡುಗಳ ಕಾಮದೋಕುಳಿಯಾಟದ ರುದ್ರ ರಮಣೀಯ ದೃಶ್ಯಗಳು. ಆದೇನೂ ಮಸಾಜ್ ಸೆಂಟರ್ ಗಳೋ ಮಜಾ ಕೇಂದ್ರಗಳೋ ಎಂಬ ಅನುಮಾನ. […]

Continue Reading

ಹೆದ್ದಾರಿ ಗುಂಡಿಗೆ ದ್ವಿಚಕ್ರ ಸವಾರ ಬಲಿ : ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಹೋರಾಟ ಸಮಿತಿ ಆಗ್ರಹ

ಮುನೀರ್ ಕಾಟಿಪಳ್ಳಸಂಚಾಲಕರು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಮಂಗಳೂರು ಬಿಸಿ ರೋಡ್ ರಾಷ್ಟ್ರೀಯ ಹೆದ್ದಾರಿಯ ಪಣಂಬೂರು ಸಮೀಪ ರಸ್ತೆ ನಡುವೆ ದಿಢೀರ್ ಎದುರಾದ ಹೊಂಡ ತಪ್ಪಿಸಲು ಯತ್ನಿಸಿದ ದ್ವಿಚಕ್ರ ವಾಹನ ಸವಾರ ರಸ್ತೆಗೆ ಉರುಳಿ ಬಿದ್ದು ಹಿಂಬದಿಯ ಘನವಾಹನದಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬೇಜವಾಬ್ದಾರಿತನ, ಕರ್ತವ್ಯಲೋಪವೇ ನೇರ ಕಾರಣವಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಅಪಘಾತಕ್ಕೆ ಬಲಿಯಾದ ಸವಾರನ ಕುಟುಂಬಕ್ಕೆ‌ ಹೆದ್ದಾರಿ ಪ್ರಾಧಿಕಾರ ಪರಿಹಾರ […]

Continue Reading

ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಬಿಜೆಪಿ ಕಾರ್ಪೊರೇಟರ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲು DYFI ಒತ್ತಾಯ

ಉರ್ವಸ್ಟೋರ್ ಸುಂಕದಕಟ್ಟೆಯ ನಾಗರಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಧೀರ್ಘ ಕಾಲದಿಂದ ಅನುಭವಿಸುತ್ತಿದ್ದು, ಅದನ್ನು ಪರಿಹರಿಸಬೇಕಾದ ಸ್ಥಳೀಯ ಕಾರ್ಪೊರೇಟರ್ ತನ್ನ ಜವಾಬ್ದಾರಿಯನ್ನು ಮರೆತು ನಾಗರಿಕರ ಮೇಲೆಯೇ ಎಗರಾಡಿ ಅಸಂಬದ್ಧ ಮಾತುಗಳನ್ನಾಡಿದ್ದು,ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು DYFI ನೇತೃತ್ವದಲ್ಲಿ ಮನಪಾ ಮೇಯರ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ತಲೆದೋರಿದ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಅಲ್ಪಸ್ವಲ್ಪ ಸುಧಾರಿಸಿದ್ದು,ಅದನ್ನು ಶಾಶ್ವತವಾಗಿ ಪರಿಹರಿಸಬೇಕು ಹಾಗೂ ಸ್ಥಳೀಯ ನಾಗರಿಕರು ಸಮಸ್ಯೆಯಲ್ಲಿದ್ದಾಗ ಅತ್ತ ಕಡೆ ಮುಖ ಮಾಡದೆ,ಸಮಸ್ಯೆ ಅಲ್ಪಸ್ವಲ್ಪ […]

Continue Reading

ಗುರುಪುರ ವಲಯದ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ.! ಆತಂಕದಲ್ಲಿ ನಾಗರಿಕರು

ದ.ಕ ಜಿಲ್ಲೆಯ ಹಲವಾರು ಪ್ರದೇಶದ ಪರಿಸರದಲ್ಲಿ ಚಿರತೆ ಪ್ರತ್ಯಕ್ಷವಾಗಿ ಸಾಕು ನಾಯಿಗಳನ್ನು ಬೇಟೆಯಾಡುವ ಕಾಟ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮನೆಯಲ್ಲಿ ಸಾಕಿದ ಸಾಕು ನಾಯಿಗಳ ಮೇಲೆ ಚಿರತೆಯು ರಾತ್ರಿಯ ಹೊತ್ತಿನಲ್ಲಿ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಪರಿಸರದಲ್ಲಿ ಚಿರತೆಯು ಕಾಣಿಸಿದ್ದು ಈ ಪ್ರದೇಶದ ನಾಗರಿಕರು ಬಹಳ ಆತಂಕಕ್ಕಿಡಾಗಿದ್ದಾರೆ.ಇದೇ ಪರಿಸರದ ವ್ಯಕ್ತಿಯೊಬ್ಬರು ಬೆಳಗಿನ ಜಾವ ತನ್ನ ವಾಹನದಲ್ಲಿ ಸಂಚರಿಸುವ ವೇಳೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಿರತೆ ಹಾರಿದ್ದನ್ನು ಕಣ್ಣಾರೆ ಕಂಡಿದ್ದಾರೆ.ಈ ಪರಿಸರದಲ್ಲಿ […]

Continue Reading

ಬಜಾಲ್ ವಾರ್ಡಿನ ಅಭಿವೃದ್ಧಿ ಕಡೆಗಣಿಸಿದರೆ ಹೋರಾಟ ತೀವೃಗೊಳ್ಳಲಿದೆ: ಸಂತೋಷ್ ಬಜಾಲ್

ಸ್ಮಾರ್ಟ್ ಸಿಟಿಯ ಹೆಸರಲಿ ಕೋಟಿ ಕೋಟಿ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಹೊಡೆದು ಜನರ ತೆರಿಗೆ ಹಣವನ್ನು ಪೋಲು ಮಾಡುವ ಶಾಸಕರಿಗೆ ಬಜಾಲ್ ವಾರ್ಡಿನ ಮುಖ್ಯರಸ್ತೆಯ ಅಗಲೀಕರಣ ಮತ್ತು ಕಾಂಕ್ರಟೀಕರಣಗೊಳಿಸಲಾಗಲಿ ಅಥವಾ ಬಜಾಲ್ ವಾರ್ಡಿನ ಅಭಿವೃದ್ಧಿಗೊಳಿಸುವಲ್ಲಿ ಕಡೆಗಣಿಸುವುದಾದರೆ ಈ ಭಾಗದ ಜನರ ಹೋರಾಟ ತೀವೃಗೊಳ್ಳಲಿದೆ ಎಂದು ಸಿಪಿಐಎಂ ಪಕ್ಷದ ನಗರ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು (18-7-2023) ಬಜಾಲ್ ಜಲ್ಲಿಗುಡ್ಡೆ ಮುಖ್ಯರಸ್ತೆ ಅಗಲೀಕರಿಸಿ ಕಾಂಕ್ರಟೀಕರಣಗೊಳಿಸಲು ಹಾಗೂ ಜಯನಗರ ಸಹಿತ ಎಲ್ಲಾ ಮುಖ್ಯರಸ್ತೆಗಳ ಕಾಂಕ್ರೀಟಿಕರಣಗೊಳಿಸಲು […]

Continue Reading

ಪುತ್ತೂರು: ಡಾಕ್ಟರ್ ನ ಎಡವಟ್ಟು.! ಡಾಕ್ಟರ್ ಮಾತು ಕೇಳಿ ಶಸ್ತ್ರಚಿಕಿತ್ಸೆ ಮಾಡಿಸುವವರೇ ಎಚ್ಚರ.!! ಸಮಯ ಪ್ರಜ್ಞೆಯಿಂದ ಪಾರಾದ ಕುಟುಂಬ

ಪುತ್ತೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಜುಲೈ 14 ರ ಶುಕ್ರವಾರ ಬಾರ್ಯ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಫೈಝಲ್ ಮೂರುಗೋಳಿ ಅವರು ಹೊಟ್ಟೆ ನೋವಿನ ಕಾರಣದಿಂದಾಗಿ ತನ್ನ 4 ವರ್ಷ ಪ್ರಾಯದ ಪಹ್ಲಾ ಎಂಬ ಹೆಣ್ಣು ಮಗುವನ್ನು ಪುತ್ತೂರಿನ ಮಕ್ಕಳ ತಜ್ಞರಾದ ಡಾ.ಶ್ರೀಕಾಂತ್ ಅವರ ಬಳಿ ತಪಾಸಣೆಗೆ ಕರೆದು ಕೊಂಡು ಹೋಗುತ್ತಾರೆ.ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಹೊಟ್ಟೆಯ ಸ್ಕ್ಯಾನ್ ಮಾಡಿ ಬರಲು ತಿಳಿಸುತ್ತಾರೆ. ಚೇತನ ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗದಲ್ಲಿ ಫಹ್ಲಾಲ ಹೊಟ್ಟೆಯ ಸ್ಕ್ಯಾನ್ ಮಾಡಿಸಿ ಬಂದು ರಿಪೋರ್ಟ್ […]

Continue Reading

ಪುತ್ತೂರು: ಪತ್ರಕರ್ತನ ಮೇಲೆ ದಾಳಿ ನಡೆಸಿ, ಮೊಬೈಲ್ ಪುಡಿಗೈದ ಪ್ರಕರಣ: ಜರ್ನಲಿಸ್ಟ್ ಯೂನಿಯನ್ ಪ್ರತಿಭಟನೆ ಎಚ್ಚರಿಕೆ

ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿ ರೀತಿಯಲ್ಲಿ ಮರದ ಕೊಂಬೆಗಳನ್ನು ತೆರವುಗೊಳಿಸುವ ಮೆಸ್ಕಾಂ ಸಿಬ್ಬಂದಿಗಳ ಚಿತ್ರಿಕರಿಸುತ್ತಿದ್ದ ಪತ್ರಕರ್ತರ ಮೊಬೈಲನ್ನು ಕಸಿದು ಹಾನಿಗೊಳಿಸಿದ ಘಟನೆ ಪುತ್ತೂರು ಕಸಬಾ ನಗರ ಠಾಣಾ ಬಪ್ಪಳಿಗೆಯ ಗುಂಪಕಲ್ಲು ಎಂಬಲ್ಲಿ ನಡೆದಿದೆ. ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿಯ ವರದಿಗಾರ ನಿಶಾಂತ್ ಬಿಲ್ಲಂಪದವು ಅವರ ಮೇಲೆ ಹಲ್ಲೆ ನಡೆದಿದೆ.ಜು .15 ರ ಸಂಜೆ ಬಪ್ಪಳಿಗೆಯಲ್ಲಿರುವ ಗುಂಪಕಲ್ಲು ಅಂಬಿಕಾ ವಿದ್ಯಾಸಂಸ್ಥೆಯ ಸಮೀಪ ಪುತ್ತೂರಿನಿಂದ ಬಲ್ನಾಡು ತೆರಳುವ ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ತೆರವುಗೊಳಿಸುವ […]

Continue Reading

ಸುರತ್ಕಲ್ – ಬಿ.ಸಿ ರೋಡ್ ಮರಣದ ಹೆದ್ದಾರಿ.ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳ ಕುರಿತು ಪ್ರಶ್ನಿಸಬೇಡಿ…

ಮಳೆಗಾಲದ ಮೊದಲ ತಿಂಗಳ ಮಳೆಗೆ ಮಂಗಳೂರಿನ ಬಿ ಸಿ ರೋಡ್ ನಿಂದ ಸುರತ್ಕಲ್ ಟೋಲ್ ಗೇಟ್ ವರಗಿನ ರಾಷ್ಟ್ರೀಯ ಹೆದ್ದಾರಿ ಪೂರ್ತಿ ಗುಂಡಿಗಳು ಬಿದ್ದಿವೆ.ಕೆಲವು ಗುಂಡಿಗಳಂತೂ ಅರ್ಧ ಅಡಿ ಆಳ, ಕೆಲವು ಮೀಟರ್ ಗಟ್ಟಲೆ ಅಗಲ. ಮಳೆ ಸುರಿಯುತ್ತಿರುವಾಗಲಂತೂ ರಸ್ತೆಯಲ್ಲಿ ನೀರು ತುಂಬಿ ಗುಂಡಿಗಳು ಗೋಚರಿಸುವುದೇ ಇಲ್ಲ. ಕೆಲವು ಗುಂಡಿಗಳು ದಿಢೀರಾಗಿ ಎದುರುಗೊಂಡು ವಾಹನ ಸವಾರರನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ದ್ವಿಚಕ್ರ ವಾಹನ ಸವಾರರಂತೂ ಈ ಗುಂಡಿಗಳನ್ನು ಗಮನಿಸದಿದ್ದರೆ ಕೆಳಗೆ ಬೀಳಲೇಬೇಕು. ಕಾರು, ಟ್ರಕ್ಕುಗಳು ಗುಂಡಿಗೆ ಬಿದ್ದ ರಭಸಕ್ಕೆ ರಸ್ತೆಯಲ್ಲೆ […]

Continue Reading

ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸಿ, ಹೆದ್ದಾರಿ ಗುಂಡಿಗಳನ್ನು ಮುಚ್ಚಿಸಿ : ಹೋರಾಟ ಸಮಿತಿಯಿಂದ ಪ್ರತಿಭಟನೆಯ ಎಚ್ಚರಿಕೆ

ಮುನೀರ್ ಕಾಟಿಪಳ್ಳ ಸಂಚಾಲಕರು,ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಹೆದ್ದಾರಿ ಮದ್ಯೆ ಅಪಾಯಕಾರಿ ಸ್ಥಿತಿಯಲ್ಲಿ ಇರುವ ನಿರುಪಯೋಗಿ ಸುರತ್ಕಲ್ ಟೋಲ್ ಬೂತ್ ತೆರವುಗೊಳಿಸಲು‌ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳದಿರುವುದು, ಸುರತ್ಕಲ್ ಟೋಲ್ ಬೂತ್ ನಿಂದ ಬಿ ಸಿ ರೋಡ್ ವರಗೆ ಮಳೆಗಾಲದ ಆರಂಭದಲ್ಲೇ ಹೆದ್ದಾರಿ ಪೂರ್ತಿ ಬಿದ್ದಿರುವ ಮಾರಣಾಂತಿಕ ಗುಂಡಿಗಳನ್ನು ಮುಚ್ಚಲು ಮುಂದಾಗದಿರುವುದನ್ನು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ನಿರುಪಯೋಗಿ ಟೋಲ್ ಬೂತ್ ತೆರವು, ಹೆದ್ದಾರಿ ಗುಂಡಿಗಳನ್ನು ಮುಚ್ಚಿಸಲು ಮುಂದಾಗದಿದ್ದಲ್ಲಿ ಸರಣಿ […]

Continue Reading

ಆಸ್ಪತ್ರೆಯ ಬೇಜವಾಬ್ದಾರಿ, ವೈದ್ಯರ ನಿರ್ಲಕ್ಷಕ್ಕೆ ಗರ್ಭಿಣಿ ಹೆಣ್ಣು ಮಗಳೊಬ್ಬಳು ಕೋಮಕ್ಕೆ ಜಾರಿದ್ದಾಳೆ.ಬಡವರ ಜೀವಕ್ಕೆ ಬೆಲೆನೇ ಇಲ್ಲದ ಸ್ಥಿತಿ‌ ನಿರ್ಮಾಣಗೊಂಡಿದೆ

✍️. ಸಂತೋಷ್ ಬಜಾಲ್ಜಿಲ್ಲಾ ಕಾರ್ಯದರ್ಶಿಡಿವೈಎಫ್ಐ ದ.ಕ ಮಂಗಳೂರಿನ ಪ್ರತಿಷ್ಠಿತವೆಂದು ಕರೆಸಿಕೊಳ್ಳುವ ಎ‌.ಜೆ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿರುವ ಗರ್ಭಿಣಿ ಹೆಣ್ಣುಮಗಳೊಬ್ಬಳು ಆಸ್ಪತ್ರೆಯ ಬೇಜವಬ್ದಾರಿ ಮತ್ತು ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದ್ದಾರೆ. ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ್ದಾರೆ. ವೇಣೂರಿನ ಶಿಲ್ಪಾ ಅನ್ನುವ ಗರ್ಭಿಣಿ ಹೆಣ್ಣುಮಗಳೊಬ್ಬಳು ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಜುಲೈ 2 ರಂದು ಎ.ಜೆ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೆರಿಗೆಗೆ ಮೊದಲು ಕಳೆದ ಒಂಬತ್ತು ತಿಂಗಳು ಎಲ್ಲಾ ರೀತಿಯ ವೈದ್ಯಕೀಯ […]

Continue Reading