ಮಂಗಳೂರು ವಿ.ವಿ ಅಂಕಪಟ್ಟಿ ಪರಿಶೀಲನೆಗೆಂದು ಪಡಕೊಂಡ ಹೆಚ್ಚಿನ ಮೊತ್ತವನ್ನು ಹಿಂಪಾವತಿಸಲು ಒತ್ತಾಯಿಸಿ DYFI ಜಿಲ್ಲಾ ಸಮಿತಿ ಮನವಿ

ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ಜಿ.ಪಿ.ಎಸ್‌.ಟಿ.ಆರ್- 2022 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಪರಿಶೀಲನೆಗೆ ತಮ್ಮ ಹಳೆ ವಿದ್ಯಾರ್ಥಿಗಳು ಪ್ರತಿ ಅಂಕಪಟ್ಟಿ/ ಪ್ರಮಾಣಪತ್ರಕ್ಕೆ 1500 ಯಂತೆ ಪಾವತಿಸಿರುತ್ತಾರೆ. ಇದರಂತೆ ಒಂದು ದೊಡ್ಡ ಪ್ರಮಾಣದ ಮೊತ್ತವನ್ನು ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯವು ಸಂಗ್ರಹಿಸಿರುತ್ತದೆ. ಪ್ರತಿ ವಿದ್ಯಾರ್ಥಿಗಳಿಂದ ಅಂದಾಜು 18,000 ದಷ್ಟು ಮೊತ್ತವನ್ನು ವಿಶ್ವವಿದ್ಯಾಲಯವು ಚಲನ್ ರೂಪದಲ್ಲಿ ಸಂಗ್ರಹಿಸಿದ್ದು ಸುಮಾರು 130 ಅಭ್ಯರ್ಥಿಗಳಿಂದ ಸಂಗ್ರಹವಾದ ನಂತರದಲ್ಲಿ ಈ ಮೊತ್ತವನ್ನು 500 ರೂಪಾಯಿಗಳಿಗೆ ಇಳಿಸಲಾಗಿದೆ. ಆದರೆ ಈ ಹಿಂದೆ ಪ್ರತಿಗಳಿಗೆ 1500ನಂತೆ ಪಾವತಿಸಿರುವ ಅಭ್ಯರ್ಥಿಗಳಿಗೆ […]

Continue Reading

ಯುವ ತಲೆಮಾರು ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಮುಂದಾಗಬೇಕು: ಡಾ ಚರಣ್ ಎ.

ನಮ್ಮದು ಜಾತ್ಯಾತೀತ ರಾಷ್ಟ್ರ. ಜಾತ್ಯಾತೀತತೆಯ ಮೌಲ್ಯಗಳನ್ನೇ ಬುಡಮೇಲು ಮಾಡಿ ಅದರ ಆಶಯಗಳಿಗೆ ವಿರುದ್ಧವಾಗಿ ಯುವಜನರನ್ನು ಧಿಕ್ಕುತಪ್ಪಿಸುವ ಮತಾಂದ ಶಕ್ತಿಗಳಿಂದ ಮತ್ತು ಅಂತಹ ಒಡೆದಾಳುವ ನೀತಿಗಳಿಂದ ಈ ದೇಶಕ್ಕೆ ಅಪಾಯ ಕಾದಿದೆ . ಪ್ರಸಕ್ತ ಕಾಲಘಟ್ಟದಲ್ಲಿ ಯುವತಲೆಮಾರು ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಮುಂದಾಗಬೇಕೆಂದು ಶಾಫೀ ನರ್ಸಿಂಗ್ ಹೋಮ್ ನ ವೈದ್ಯರಾದ ಡಾ ಚರಣ್ ರವರು ಭಗತ್ ಸಿಂಗ್ ಭವನದಲ್ಲಿ ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಡಿವೈಎಫ್ಐ ಮುಖಂಡ ಕಾಂ ಶ್ರೀನಿವಾಸ್ ಬಜಾಲ್ ಅವರ […]

Continue Reading

ಇಂದು ಸಂಘನಿಕೇತನದಲ್ಲಿ ಸಮನ್ವಯ ಬೈಠಕ್, ಪುತ್ತಿಲ ಪರಿವಾರ,ಬ್ರಿಜೇಶ್ ಚೌಟ,ನಳಿನ್ ಕುಮಾರ್ ಕಟೀಲ್ ಬಗ್ಗೆ ಚರ್ಚೆ ಸಾಧ್ಯತೆ

ಇಂದು ಮಂಗಳೂರಿನ ಸಂಘ ನಿಕೇತನದಲ್ಲಿ ಪರಿವಾರದ ಸಮನ್ವಯ ಬೈಠಕ್ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಕುರಿತು ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.ಹಿಂದೂ ಸಂಘಟಕ ಅರುಣ್ ಕುಮಾರ್ ಪುತ್ತಿಲ ವಿಚಾರ ಕೂಡ ಸಭೆಯಲ್ಲಿ ಚರ್ಚೆಯಾಗಲಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟಗೆ ಲೋಕಸಭಾ ಟಿಕೆಟ್ ನೀಡುವ ಕುರಿತು ಇದೇ ವೇಳೆ ಮಾತುಕತೆ ನಡೆಯಲಿದೆ. ಮಂಗಳೂರಿನ ಸಂಘನಿಕೇತನದಲ್ಲಿ ಬೈಠಕ್ ನಡೆಯಲಿದ್ದು. ಬೈಠಕ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ. ಬಿಜೆಪಿ, ಸಂಘಪರಿವಾರ ಹಾಗೂ ಸಂಘಟನೆಗಳ ಸುಮಾರು […]

Continue Reading

ಕೋಮುವಾದದ ವಿರುದ್ಧದ ಹೋರಾಟ ನಿರಂತರ: ಸುನೀಲ್ ಕುಮಾರ್ ಬಜಾಲ್

ಪ್ರಸಕ್ತ ಸನ್ನಿವೇಶದಲ್ಲಿ ಕೋಮುವಾದವೆಂಬ ವಿಷ ದೇಶದುದ್ದಗಲಕೂ ಆವರಿಸಿ ವಿಷಮ ಪರಿಸ್ಥಿತಿಯನ್ನು ನಿರ್ಮಿಸಿದೆ. ಕೇಂದ್ರದ ಬಿಜೆಪಿ ಸರಕಾರ ಇಂದು ಫ್ಯಾಸಿಸ್ಟ್ ಮಾದರಿಯಲ್ಲಿ ದೇಶವನ್ನಾಳುತ್ತಿದೆ. ಸಮಾಜದಲ್ಲಾಗುವ ಅನ್ಯಾಯ ದಬ್ಬಾಳಿಕೆಗಳ ವಿರುದ್ದ , ಬಿಜೆಪಿ ಸರಕಾರದ ಕೋಮು ರಾಜಕಾರಣದ ಆಡಳಿತ ನೀತಿಯ ವಿರುದ್ದ ಧ್ವನಿ ಎತ್ತಿದರೆ ಅಂತಹ ಧ್ವನಿಯನ್ನು ಹಿಂಸೆಯ ಮೂಲಕ ಹತ್ತಿಕ್ಕುವ ಅಥವಾ ದೇಶದ್ರೋಹದ ಪ್ರಕರಣ ದಾಖಲಿಸಿ ಹೋರಾಟವನ್ನು ಕುಗ್ಗಿಸುವ ದಮನಕಾರಿ, ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ದೇಶದಾದ್ಯಂತ ಆರ್.ಎಸ್.ಎಸ್ ನಡೆಸುವ ಕ್ರೌರ್ಯಕ್ಕೆ ಎದುರಾಗಿ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ನಡೆದ […]

Continue Reading

ಈ ಸಾವುಗಳು ನ್ಯಾಯವೇ.? ಬಸ್ಸು ಮಾಫಿಯಾಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು.?ಜನ ಪ್ರತಿನಿಧಿಗಳು, ಸಾರಿಗೆ ಅಧಿಕಾರಿಗಳು ನೇರ ಹೊಣೆ.

ಮಂಗಳೂರು-ಮೂಡಬಿದ್ರೆ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ ಗಳ ಧಾವಂತಕ್ಕೆ ದ್ವಿಚಕ್ರ ಸವಾರರು ಬಲಿಯಾಗುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ಗುರುಪುರ ಜಂಕ್ಷನ್ ಬಳಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ಸವಾರ ಸಾವನ್ನಪ್ಪಿದ ಘಟನೆಯನ್ನು ಖಂಡಿಸಿ ಸಾರ್ವಜನಿಕರು ಇಂದು ಗುರುಪುರ-ಕೈಕಂಬ ಜಂಕ್ಷನ್ ನಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಖಾಸಗಿ ಬಸ್ ಗಳ ಧಾವಂತಕ್ಕೆ ಇತ್ತೀಚೆಗೆ ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚಾಗುತ್ತಿದೆ. ಪೊಳಲಿ ಕರಿಯಂಗಳ ನಿವಾಸಿ ಬ್ಯಾಂಕ್ ಉದ್ಯೊಗಿ ಸಂತೋಷ್ ಕುಮಾರ್ ನಿನ್ನೆ ಗುರುಪುರ ಬಳಿ ಬಸ್ ಡಿಕ್ಕಿ […]

Continue Reading

ಗುರುಪುರ: ಖಾಸಗಿ ಬಸ್-ಬೈಕ್ ಅಪಘಾತ: ಓರ್ವ ಮೃತ್ಯು

ಮೂಡಬಿದಿರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಜೀವನ್ ಹೆಸರಿನ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗುರುಪುರದಲ್ಲಿ ನಡೆದಿದೆ. ಕರಿಯಂಗಳದ ಸಂತೋಷ್ ಮೃತ ಯುವಕ. ಆತನಿಗೆ 38 ವರ್ಷ ವಯಸ್ಸಾಗಿತ್ತು. ವಾಮಂಜೂರು ವಿ.ಎಸ್. ಬ್ಯಾಂಕಿನ ಉದ್ಯೋಗಿಯಾಗಿದ್ದ. ಗುರುಪುರ ಬ್ಯಾಂಕ್ ಎದುರು ಘಟನೆ ನಡೆದಿದೆ.

Continue Reading

ಕೋಮುವಾದ ತಡೆ, ಮತೀಯ ದ್ವೇಷದ ಹತ್ಯೆಯ ಮರು ತನಿಖೆಗೆ ಆಗ್ರಹಿಸಿ ಸಿ.ಎಂ ಬಳಿ ನಿಯೋಗ: ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ

“ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆ, ಮಂಗಳೂರು” ಇದರ ಮಹತ್ವದ ಸಭೆಯು ಬಿ.ರಮಾನಾಥ ರೈ ಯವರ ಅಧ್ಯಕ್ಷತೆಯಲ್ಲಿ ಮಂಗಳೂರು ನಗರದಲ್ಲಿ ನಡೆಯಿತು. ಅವಿಭಜಿತ ದಕ್ಷಿಣ ಕ‌ನ್ನಡ ಜಿಲ್ಲೆಯಲ್ಲಿ ಆಳವಾಗಿ ಬೇರೂರಿರುವ ಕೋಮುವಾದವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತೆಗೆದು ಕೊಳ್ಳಬೇಕಾದ ಆದ್ಯತೆಯ ಕೆಲಸಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿಗಳ ಬಳಿಗೆ ಜಿಲ್ಲಾ ಮಟ್ಟದ ನಿಯೋಗವನ್ನು ಕೊಂಡೊಯ್ಯಲು ತೀರ್ಮಾನಿಸಲಾಯಿತು. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಕೋಮು ಪ್ರಚೋದಕ ಕೃತ್ಯಗಳು,ವರ್ಗಿಯವಾದಕ್ಕಾಗಿ ನಡೆದ ಕೊಲೆಗಳ ಕುರಿತು […]

Continue Reading

MRPL ಪೆಟ್ ಕೋಕ್, ಡೀಸೆಲ್, ಪೆಟ್ರೋಲ್ ಅಕ್ರಮ ಮಾಫಿಯಾ

ಉತ್ತಮ ಮೆಟೀರಿಯಲ್ ಗಳನ್ನು ವೇಸ್ಟ್ ಮೆಟೀರಿಯಲ್ ಎಂದು ಪರಿಗಣಿಸಿ ಬಿಲ್, ಇನ್ವಾಯ್ಸ್ ಇಲ್ಲದೆ ಅಕ್ರಮ ಸಾಗಾಟ ಮಂಗಳೂರು ಆರ್ಥಿಕತೆಯ ಹೆಬ್ಬಾಗಿಲೇ ಪಣಂಬೂರು, ಬೈಕಂಪಾಡಿ, ಸುರತ್ಕಲ್ ಸುತ್ತಮುತ್ತಲಿನ ಪ್ರದೇಶ. ಇಲ್ಲಿ ತಲೆ ಎತ್ತಿ ನಿಂತಿರುವ ಅಗಾಧ ಪ್ರಮಾಣದ ಬೃಹತ್ ಕೈಗಾರಿಕೆಗಳು ದಿನನಿತ್ಯ ಕೋಟಿಗಟ್ಟಲೆ ವಹಿವಾಟಿನ ಕೇಂದ್ರವಾಗಿದೆ. MRPL, ONGC, HPCL, BASF, ಮಂಗಳೂರು ಬಂದರು, MCF, ಇನ್ನೂ ಹಲವಾರು ದೊಡ್ಡ ದೊಡ್ಡ ಉದ್ಯಮ ಸುರತ್ಕಲ್ ಭಾಗದಲ್ಲಿದೆ. ಆದರೆ ಇದೀಗ ಕೆಲವು ಕೈಗಾರಿಕೆ ಸಂಸ್ಥೆಗಳು ಪ್ರಭಾವಶಾಲಿ ಕೆಲ ಉದ್ಯಮಿಗಳಿಗೆ ಅಕ್ರಮ […]

Continue Reading

ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಮಾನಾಥ ರೈ ಹೆಸರು ಬಹುತೇಕ ಫಿಕ್ಸ್.?

ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಮಮತಾ ಗಟ್ಟಿ, ಚಂದ್ರ ಪ್ರಕಾಶ್ ಶೆಟ್ಟಿ ಮುನ್ನೆಲೆಗೆ ತರಲು ಚಿಂತನೆ ಮಹತ್ವದ ಬೆಳವಣಿಗೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಾಲಿ ಅಧ್ಯಕ್ಷ ಹರೀಶ್ ಕುಮಾರ್ ಸ್ಥಾನಕ್ಕೆ ಕುತ್ತು ಬರಲಿದ್ದು, ಅವರ ಸ್ಥಾನಕ್ಕೆ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ರಮಾನಾಥ ರೈ ಯವರನ್ನು ಕೂರಿಸುವ ಪ್ರಯತ್ನ ಕೆಪಿಸಿಸಿ ಮಟ್ಟದಲ್ಲಿ ನಡೆಯುತ್ತಿದೆ ಅನ್ನುವ ಮಾಹಿತಿ ಲಭ್ಯವಾಗಿದೆ. ವಿಧಾನಸಭಾ ಸದಸ್ಯರಾಗಿರುವ ಹರೀಶ್ ಕುಮಾರ್ ರವರಿಗೆ ಬಿಲ್ಲವ ಕೋಟಾದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನವೂ ಅನಾಯಾಸವಾಗಿ ದೊರೆತಿತ್ತು. ಬಹುಸಂಖ್ಯಾತ ಬಿಲ್ಲವರು […]

Continue Reading

ಕಾಂಗ್ರೆಸ್ ಪ್ರಭಾವಿ ಮುಖಂಡನ ಅಣಬೆ ಫ್ಯಾಕ್ಟರಿಗೆ ಡಿ.ಸಿ ತಲೆ ದಂಡ.! ಮುಲೈ ಮುಹಿಲನ್ ದ.ಕ ಜಿಲ್ಲಾ ನೂತನ ಡಿ.ಸಿ

ಮಂಗಳೂರಿನ ವಾಮಂಜೂರು ತಿರುವೈಲ್ ವಾರ್ಡ್ ನ ಓಂಕಾರ ನಗರದಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡರು, ಮಾಜಿ ಶಾಸಕರ ಪಾಲುದಾರಿಕೆ, ಒಡೆತನದ ಮಶ್ರೂಮ್ ಫ್ಯಾಕ್ಟರಿ ವಿರುದ್ಧ ಸ್ಥಳೀಯ ಸಾರ್ವಜನಿಕರು ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಇಳಿದ ಪರಿಣಾಮ ಹಾಗೂ ಈ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರಿಂದ ವಿವಿಧ ರೀತಿಯ ತನಿಖೆ ನಡೆಸಿ ಕೊನೆಗೆ ಜಿಲ್ಲಾಧಿಕಾರಿ ರವಿಕುಮಾರ್ ‘ವೈಟ್ ಗ್ರೋ ಎಗ್ರಿ ಎಲ್ ಎಲ್ ಪಿ’ ಹೆಸರಿನ ಅಣಬೆ ಫ್ಯಾಕ್ಟರಿಗೆ ಬೀಗ ಜಡಿದು ಆದೇಶಿಸಿದರು. ಸ್ಪೆಷಲ್ ನ್ಯೂಸ್ ಮೀಡಿಯಾ ನಿನ್ನೆಯಷ್ಟೇ ಜಿಲ್ಲಾಧಿಕಾರಿ […]

Continue Reading