ಮೂರೂ ಶೂಟೌಟ್ ಪ್ರಕರಣದಲ್ಲಿ ಬನ್ನಂಜೆ ರಾಜನನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

ಆರೋಪಿಯ ಪರವಾಗಿ ರಾಜೇಶ್ ‌ಕುಮಾರ್‌ ಅಮ್ಟಾಡಿ ವಾದಿಸಿದ್ದರು ಮಂಗಳೂರಿನ ನಾನಾ ಕಡೆಗಳಲ್ಲಿ ದಾಖಲಾಗಿದ್ದ ಶೂಟೌಟ್‌ ಪ್ರಕರಣಗಳಲ್ಲಿ ಬನ್ನಂಜೆರಾಜನನ್ನು ದೋಷಮುಕ್ತಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಬಂಟ್ಸ್‌ ಹಾಸ್ಟೆಲ್‌ ನಿವಾಸಿ ಇರವಿನ್‌ ಪಿಂಟೋ ಮತ್ತು ಅವರ ಪತ್ನಿ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿ ವಾಪಸಾಗುವ ವೇಳೆ ಹೊಯ್ಗೆ ಬಜಾರ್‌ ಬಳಿ ಅಪರಿಚಿತರು ಕಾರನ್ನು ಅಡ್ಡಗಟ್ಟಿ ಶೂಟೌಟ್‌ ಮಾಡಿ ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಬನ್ನಂಜೆರಾಜ ಮತ್ತು […]

Continue Reading

ಉಡುಪಿ: ಬಿಜೆಪಿ ಪಟ್ಟಿ ಬಹುತೇಕ ಫೈನಲ್; ಹಿಂದುತ್ವದ ಪ್ರಬಲ ಪ್ರತಿಪಾದಕ ಯಶ್’ಪಾಲ್,ಆರ್ ಎಸ್ ಎಸ್ ಪ್ರಚಾರಕ ಗುರುರಾಜ್ ಗೆ ಟಿಕೆಟ್.!

ಸುನೀಲ್ ಕುಮಾರ್ ಹೊರತುಪಡಿಸಿ ಹಾಲಿ ನಾಲ್ವರು ಶಾಸಕರಿಗೆ ಕೈ ಕೊಟ್ಟ ಬಿಜೆಪಿ.! ಹೇಳಿ ಕೇಳಿ ಉಡುಪಿ ಸಂಘ ಪರಿವಾರದ ಭದ್ರಕೋಟೆ. ಬಿಜೆಪಿಯ ನೆಚ್ಚಿನ ತಾಣ. ಇಲ್ಲಿ ಕಾಂಗ್ರೆಸ್ಸಿನದ್ದು ಶೂನ್ಯ ಸಾಧನೆ. ಕಳೆದ ಚುನಾವಣೆಯಲ್ಲಿ ಉಡುಪಿಯ ಎಲ್ಲಾ ಕ್ಷೇತ್ರಗಳು ಬಿಜೆಪಿಯ ಪಾಲಾಗಿತ್ತು. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಠಾತ್ ರಾಜಕೀಯ ನಿವೃತ್ತಿ ಘೋಷಣೆ ಬಿಜೆಪಿಯಲ್ಲಿ ಸ್ವಲ್ಪ ಮಟ್ಟಿಗೆ ಬುಡ ಅಲ್ಲಾಡಿದರೂ ಬಿಜೆಪಿ ಹೈಕಮಾಂಡ್ ಹಾಗೂ ಆರ್ ಎಸ್ ಎಸ್ ಅದಕ್ಕೆಲ್ಲ ತೇಪೆ ಹಚ್ಚಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಮಾಡಿದೆ. […]

Continue Reading

ಕೃಷಿ ತಜ್ಞ ಮೂಡುಬಿದಿರೆಯ ಬನ್ನಡ್ಕದ ಸೋನ್ಸ್ ಫಾರ್ಮ್ ನ ಎಲ್. ಸಿ. ಸೋನ್ಸ್ ನಿಧನ

ಕೃಷಿ ತಜ್ಞ, ಮೂಡುಬಿದಿರೆ ಬನ್ನಡ್ಕದ ಸೋನ್ಸ್ ಫಾರ್ಮ್‍ನ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್ ಅವರು ಇಂದು ವಿಧಿವಶವಾಗಿದ್ದಾರೆ.1934 ಏಪ್ರಿಲ್ 4ರಂದು ಜನಿಸಿರುವ ಡಾ.ಎಲ್.ಸಿ ಸೋನ್ಸ್ ತನ್ನ ಜೀವನವನ್ನು ಕೃಷಿಗಾಗಿ ಮುಡಿಪಾಗಿಟ್ಟವರು.ಕೃಷಿ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಸೋನ್ಸ್ ಅನಾನಸು ಕೃಷಿ, ಬಿದಿರಿನ ವಿವಿಧ ಪ್ರಬೇಧ, ದೇಶ-ವಿದೇಶಗಳ ಹಣ್ಣು-ತರಕಾರಿ ಪ್ರಬೇಧಗಳನ್ನು ಮೂಡುಬಿದಿರೆ ಬನ್ನಡ್ಕದ ಮಣ್ಣಿನಲ್ಲಿ ಬೆಳೆಸಿ,ಅದರಿಂದ ಫಸಲು ಹಾಗೂ ಲಾಭಗಳಿಸಿದವರಾಗಿದ್ದಾರೆ. ಜಲ ತಜ್ಞರಾಗಿಯೂ ವಿಶೇಷ ಪರಿಣಿತಿ ಯನ್ನು ಹೊಂದಿದ್ದರು. ಕೃಷಿಯ ಜೊತೆಗೆ ಸಾಮಾಜಿಕವಾಗಿಯು ಗುರುತಿಸಿಕೊಂಡಿರುವ ಸೋನ್ಸ್ ಅವರು ಹಲವಾರು […]

Continue Reading

ವಿಶೇಷಚೇತನ ಮಹಿಳೆಯ ಅತ್ಯಾಚಾರಗೈದ ಸೂರಿಂಜೆ ನಿವಾಸಿ ರಾಜಾ ಭಟ್,ಪ್ರಕರಣ ದಾಖಲು,ಆರೋಪಿ ಪರಾರಿ.

ಮನೆಯಲ್ಲಿ ಒಂಟಿಯಾಗಿದ್ದ ವಿಶೇಷ ಚೇತನ ಮಹಿಳೆ ಮೇಲೆ ವೃದ್ಧನೋರ್ವ ಅತ್ಯಾಚಾರವೆಸಗಿರುವ ಆತಂಕಕಾರಿ ಘಟನೆಯೊಂದು ನಡೆದಿದೆ. ಈ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂರಿಂಜೆ ನಿವಾಸಿ ರಾಜಾ ಭಟ್(65) ಆರೋಪಿ. ವಿಶೇಷ ಚೇತನ ಮಹಿಳೆಯು ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದರು. ಇತ್ತೀಚೆಗೆ ಮಹಿಳೆಯ ಸಹೋದರ ಹಾಗೂ ಅವರ ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಮಹಿಳೆ ಮನೆಯಲ್ಲಿ ಒಂಟಿಯಾಗಿ ಇದ್ದರು. ಈ ಸಂದರ್ಭ ರಾಜಾ ಭಟ್ ಮನೆಗೆ ಬಂದಿದ್ದು, ಪುಸಲಾಯಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.ಬಳಿಕ ನೆರೆಮನೆಯವರಿಂದ […]

Continue Reading

ಉಡುಪಿ: ಹಾಲಾಡಿ ರಿಸೈನ್, ಮೊಳಹಳ್ಳಿ ಮಿರಾಕಲ್.! ರಘುಪತಿ ಭಟ್ಟರಿಗೆ ಸಂಚಕಾರ.!

ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗುತ್ತಾ.? ಕ್ಷಣ ಕ್ಷಣಕ್ಕೂ ಮಹತ್ವದ ಬೆಳವಣಿಗೆಗಳಿಗೆ ಉಡುಪಿ ಜಿಲ್ಲಾ ಬಿಜೆಪಿ ಸಾಕ್ಷಿಯಾಗುತ್ತಿದೆ. ನಿನ್ನೆ ಸಂಜೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಠಾತ್ ರಾಜಕೀಯ ನಿವೃತ್ತಿ ಘೋಷಣೆ ಜಿಲ್ಲಾ ಬಿಜೆಪಿಯಲ್ಲಿ ಭಾರೀ ತಲ್ಲಣಕ್ಕೆ ಕಾರಣವಾಗಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದಿಂದ ಸತತ ಐದು ಬಾರಿ ಗೆದ್ದು ಅಜೇಯರಾಗಿ ಉಳಿದವರು. ಕ್ಷೇತ್ರದಲ್ಲಿ ಅಜಾತ ಶತ್ರು. ಕುಂದಾಪುರದ ವಾಜಪೇಯಿ ಬಿರುದಾಂಕಿತರು. ರಾಜಕೀಯ ವಿರೋಧಿಗಳು ಕೂಡ ಅವರನ್ನು ಗೌರವಿಸುತ್ತಿರುವುದು ಹಾಲಾಡಿ ಸಜ್ಜನಿಕೆಗೆ ಸಾಕ್ಷಿ. ಇಂತಹ ಹಾಲಾಡಿಯನ್ನು ಬಿಜೆಪಿ ಕೂಡ ನಿರ್ಲಕ್ಷ್ಯಿಸಿತ್ತು ಅನ್ನುವುದು […]

Continue Reading

ಸೌದಿ ಅರೇಬಿಯಾದಲ್ಲಿ ಮೂಡಬಿದ್ರೆ ಗಂಟಲ್ ಕಟ್ಟೆ ನಿವಾಸಿ ಮೃತ್ಯು

ಮೂಡಬಿದ್ರೆ ತಾಲ್ಲೂಕಿನ ಗಂಟಾಲ್ಕಟ್ಟೆ ಕಲ್ಲಬೆಟ್ಟು ನಿವಾಸಿ ಅಬ್ದುಲ್ ರಹಿಮಾನ್ ರವರು ನಿನ್ನೆ ಸೌದಿ ಅರೇಬಿಯಾದ ದಮ್ಮಾಮ್ ಎಂಬಲ್ಲಿ‌ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ನಿನ್ನೆಯಷ್ಟೇ ಉಮ್ರಾ ಯಾತ್ರೆ ಮುಗಿಸಿ ಬಂದಿದ್ದರು.

Continue Reading

ಕರಾವಳಿ ಭಾಗದ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಮಾಜಿ ಡಿಸಿ ಯವರ ಪಾತ್ರ ನಿರ್ಣಾಯಕ.!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವೇರುತ್ತಿದ್ದು, ಅಧಿಕಾರಕ್ಕೇರುವ ಜೋಷ್ ನಲ್ಲಿರುವ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಫೈಟ್ ಗರಿಗೆದರಿದೆ. ಕೆಲವೊಂದು ಕಡೆ ಒಂದೇ ಕ್ಷೇತ್ರದಲ್ಲಿ ಹತ್ತಕ್ಕಿಂತ ಅಧಿಕ ಆಕಾಂಕ್ಷಿಗಳಿದ್ದಾರೆ. ರಾಜ್ಯದ ವಿದ್ಯಮಾನಗಳ ಮಾಹಿತಿ ಪಡೆಯಲು ಹಾಗೂ ಕೆಲವೊಂದು ಟಿಕೆಟ್ ಟಫ್ ಆಗಿರುವ ಕ್ಷೇತ್ರಗಳಲ್ಲಿ ಯಾರಿಗೆ ನೀಡಿದರೆ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಹೈಕಮಾಂಡ್ ಗುಪ್ತವಾಗಿ ಅಧಿಕಾರಿಯೊಬ್ಬರ ಮುಖಾಂತರ ಪಡೆಯುತ್ತಿದೆ. ಅವರು ಬೇರಾರೂ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿಯಾಗಿರುವ ಸಸಿಕಾಂತ್ ಸೆಂಥಿಲ್. ಸಸಿಕಾಂತ್ ಸೆಂಥಿಲ್ ಮೂಲತಃ ತಮಿಳುನಾಡಿನವರಾಗಿದ್ದು, […]

Continue Reading

ದ.ಕ ಜಿಲ್ಲೆ ಬಿಜೆಪಿಗೆ ಬಿಗ್ ಶಾಕಿಂಗ್.!

ಶೆಟ್ಟಿ, ಕೋಟ್ಯಾನ್, ಮಠಂದೂರು, ಅಂಗಾರ ಅಭಿಮಾನಿಗಳಲ್ಲಿ ತಳಮಳ.. ಏನಿದು ಲಾಜಿಕ್.? ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿ ಬಿಡುಗಡೆ ಮಾಡಿ ಚುನಾವಣೆಗೆ ಗ್ರ್ಯಾಂಡ್ ಎಂಟ್ರಿ ಪಡೆದಿದೆ. ಆದರೆ ಈ ಬಾರಿ ಆಡಳಿತಾರೂಢ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಇಳಿದಿದ್ದು ಕಾಂಗ್ರೆಸ್ ನ ಹೊಸ ಅಭ್ಯರ್ಥಿಗಳಿಗೆ ಟಾಂಗ್ ನೀಡಲು, ಬಿಜೆಪಿಗೆ ಮೈನಸ್ ಇರುವ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಬದಲಾಯಿಸಿ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಬಿರುಸಿನ ಚರ್ಚೆ ನಡೆಯುತ್ತಿರುವುದು […]

Continue Reading

ಹೈಕಮಾಂಡ್ ಬುಲಾವ್ ಮೇರೆಗೆ ಕಾವು ಹೇಮನಾಥ ಶೆಟ್ಟಿ ದೆಹಲಿಗೆ.

ನಾಮಪತ್ರ ಸಲ್ಲಿಕೆಗೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇರುವಾಗ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಎ.ಹೇಮನಾಥ ಶೆಟ್ಟಿ ಕಾವು,ದಿಢೀರ್ ಆಗಿ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಯಾವ ಕಾರಣಕ್ಕೆ ವರಿಷ್ಠರಿಂದ ಬುಲಾವ್ ಬಂದಿದೆ ಎಂಬುದು ತಿಳಿದಿಲ್ಲ.ಹಿಂದಿನ ಮೂರು ಚುನಾವಣೆಗಳಲ್ಲೂ ಹೇಮನಾಥ ಶೆಟ್ಟಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ತಮಗೇ ಟಿಕೆಟ್‌ ನೀಡಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದರು. ಈ ಮಧ್ಯೆ ಇವರ ದಿಢೀರ್‌ ದಿಲ್ಲಿ ಭೇಟಿ ಚರ್ಚೆಗೀಡಾಗಿದೆ. ಕಾಂಗ್ರೆಸ್‌ […]

Continue Reading

ಹಿಂದುತ್ವದ ಭದ್ರಕೋಟೆ ಕರಾವಳಿಯಲ್ಲಿ ಈ ಬಾರಿ ಬಿಜೆಪಿ ಕ್ಲೀನ್ ಸ್ವೀಪ್ ಆಗಲಿದೆಯೇ.?ಜಾದೂ ಮಾಡಲಿದೆಯಾ ಕಾಂಗ್ರೆಸ್.!

ಪರೇಶ್ ಮೇಸ್ತಾ ಸಾವು ಪ್ರಕರಣದಲ್ಲಿ ಸಿಬಿಐ ‘ಬಿ’ ರಿಪೋರ್ಟ್ ಬಿಜೆಪಿಗೆ ಮುಜುಗರ, ನೆಟ್ಟಾರು ಹತ್ಯೆ ಪ್ರಕರಣ,ಬಿಜೆಪಿ ಕಾರ್ಯಕರ್ತರು ಅಸಮಾಧಾನ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿವೆ. ಅಂತೆಯೇ 2018ರಲ್ಲಿ ಬಿಜೆಪಿ ಭದ್ರಕೋಟೆ ಎಂದೇ ಪರಿಗಣಿಸಿರುವ ಕರಾವಳಿಯಲ್ಲಿ ಕೇಸರಿ ಪಕ್ಷ ಒಟ್ಟು 19 ಕ್ಷೇತ್ರಗಳ ಪೈಕಿ 16ರಲ್ಲಿ ಗೆಲುವು ಸಾಧಿಸಿತ್ತು.ಅದಾದ ನಂತರ 2019 ರ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರ ಗೆಲ್ಲುವ ಮೂಲಕ ಸಂಖ್ಯೆ 17ಕ್ಕೇರಿತು. ಈ ಬಾರಿ,ಮೋದಿ ಅಂಶ ಮತ್ತು ಡಬಲ್ ಇಂಜಿನ್ […]

Continue Reading