ಬಜಪೆ ಪೊಲೀಸರ ಕಾರ್ಯಾಚರಣೆ, ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ; ಟಿಪ್ಪರ್ ಸಹಿತ ಹಲವಾರು ದೋಣಿಗಳು ವಶ

ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಗ್ರಾಮದ ನಂದ್ಯಾ ಎಂಬಲ್ಲಿ ಪಲ್ಗುಣಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ ಬಜ್ಪೆ ಪೊಲೀಸರು ಟಿಪ್ಪರ್ ಲಾರಿಗಳ‌ ಸಹಿತ 15 ಕಬ್ಬಿಣದ ದೋಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗುರುಪುರ ಫಲ್ಗುಣಿ ನದಿಯ ತಟದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಬಜ್ಪೆ ಪೊಲೀಸರು ಸೆ.23ರಂದು ಬೆಳಗ್ಗೆ ಜಾವ ಕಾರ್ಯಾಚರಣೆ‌ ನಡೆಸಿ ಅಕ್ರಮ ದಂಧೆಗೆ ಕಡಿವಾಣ ಹಾಕಿರುತ್ತಾರೆ. ಕಾರ್ಯಾಚರಣೆಯ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು ಸ್ಥಳದಲ್ಲಿದ್ದ […]

Continue Reading

ಮಂಗಳೂರು:ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಚಂದ್ರ ಕೆ.ವಿಧಿವಶ

ಕದ್ರಿ ಠಾಣೆಯಲ್ಲಿ ಹೆಡ್ ಕಾನ್ ಸ್ಟೆಬಲ್ ಆಗಿದ್ದುಕೊಂಡು, ಜಿಲ್ಲೆಯ ಗುಪ್ತವಾರ್ತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಕಾಸರಗೋಡು ಅಡೂರು ನಿವಾಸಿ ಚಂದ್ರ ಕೆ ತೀವ್ರ ಅನಾರೋಗ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. 1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಅವರು ಸದ್ಯದಲ್ಲೇ ಎಎಸ್ ಐ ಹುದ್ದೆಗೆ ಭಡ್ತಿಯಾಗುವವರಿದ್ದರು. ಸಿಸಿಬಿ, ಪಾಂಡೇಶ್ವರ,ಸಿಸಿಆರ್ ಬಿ, ಡಿಸಿಐಬಿ, ಸೆನ್, ಕದ್ರಿ ಠಾಣೆ ಹಾಗೂ ಪ್ರಸ್ತುತ ರಾಜ್ಯ ಗುಪ್ತವಾರ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದೆರಡು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಚಂದ್ರ ಕೆ […]

Continue Reading

ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳ ಗುಡಿಸಲುಗಳನ್ನು ಉಳಿಸಲು, ಶಾಶ್ವತ ಮನೆ ವ್ಯವಸ್ಥೆ ಕಲ್ಪಿಸಲು ಒತ್ತಾಯ- ಡಿವೈಎಫ್ಐ

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬೋಳಾರ ವಾರ್ಡಿನ ನೇತ್ರಾವತಿ ನದಿ ತೀರದಲ್ಲಿ ಕಳೆದ ಹಲವಾರು ವರುಷಗಳಿಂದ ತೆಪ್ಪದ ಮೂಲಕ ಮೀನು ಹಿಡಿದು ಕಾಯಕ ನಡೆಸುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ 8 ಕುಟುಂಬಗಳು ತಮ್ಮ ಗುಡಿಸಲುಗಳನ್ನು ಕಳೆದುಕೊಂಡು ಬೀದಿಪಾಲಾಗುವ ಪರಿಸ್ಥಿತಿ ಬಂದೊದಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 30 ಕೋಟಿ ವೆಚ್ಚದಲ್ಲಿ (PROMINADE PACKAGE 2A) ನದಿ ತೀರದಲ್ಲಿ ನಿರ್ಮಿಸಲು ಹೊರಟಿರುವ ವಾಕಿಂಗ್ ಟ್ರಾಕ್, ಸೈಕಲ್ ಟ್ರಾಕ್, ಪ್ಲೆ ಏರಿಯಾದಂತಹ ಕಾಮಗಾರಿಗಳು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಗುಡಿಸಲುಗಳಿರುವ ಜಾಗದಲ್ಲೇ […]

Continue Reading

ಮಂಗಳೂರು: ಜಿ ಆರ್ ಮೆಡಿಕಲ್ ಕಾಲೇಜು ಮಾನ್ಯತೆ ನಕಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ

ಮಂಗಳೂರು ಹೊರವಲಯದ ನೀರುಮಾರ್ಗ ಜಿ.ಆರ್ ಮೆಡಿಕಲ್ ಕಾಲೇಜು ಮಾನ್ಯತಾ ಪತ್ರವನ್ನು ನಕಲು ಮಾಡಿದ್ದು, ಇದರ ಬಗ್ಗೆ ಎಚ್ಚರ ವಹಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂ ಸಿ) ಸಾರ್ವಜನಿಕರಿಗೆ ಸೂಚಿಸಿದೆ. ಎನ್ ಎಂ ಸಿ ಬಿಡುಗಡೆ ಮಾಡಿರುವ ಸಾರ್ವಜನಿಕ ನೋಟಿಸ್ ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಜಿ ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು 2ನೇ ಬ್ಯಾಚ್ (1ನೇ ನವೀಕರಣ) ಪ್ರಮಾಣ ಪತ್ರವನ್ನು ಎನ್ ಎಂ ಸಿ ನೀಡಿರುವುದಾಗಿ ಘೋಷಿಸಿದ್ದು, ಇದು ನಕಲಿ ಪತ್ರವಾಗಿದೆ. […]

Continue Reading

ಮಂಗಳೂರು: ಮಿನಿ ಆಡಳಿತ ಸೌಧದಲ್ಲಿ ದಲ್ಲಾಳಿಗಳದ್ದೇ ದರ್ಬಾರ್.!

ಅಧಿಕಾರಿಗಳು-ದಲ್ಲಾಳಿಗಳ ಮಧ್ಯೆ ನಡೆಯುತ್ತೆ ಭರ್ಜರಿ ಡೀಲ್.! ಒಂದು ಮಾತಿದೆ. ‘ಫಾಸ್ಟ್ ಸರ್ವೀಸ್’ ಬೋರ್ಡ್ ಹಾಕಿರುವ ಬಸ್ಸಲ್ಲಿ ನೀವೇನಾದರೂ ‘ಎಕ್ಸ್ ಪ್ರೆಸ್’ ಬಸ್ ಅಂತ ತಿಳಿದು ಹತ್ತಿದರೆ ಇಳಿಯುವ ತನಕ ನೀವು ಗೋಳು ಹೊಯ್ದು ಕೊಳ್ಳುವುದು ಖಂಡಿತ. ಏಕೆಂದರೆ ಸಾಮಾನ್ಯ ಬಸ್ ಇದಕ್ಕಿಂತ ವೇಗವಾಗಿ ಹೋಗುತ್ತದೆ. ಅದು ಅವರ ತಪ್ಪಲ್ಲ. ಪ್ರಯಾಣಿಕರನ್ನು ಸೆಳೆಯಲು ಅದು ಅವರ ತಂತ್ರಗಾರಿಕೆ ಅಷ್ಟೇ. ಅದೇ ರೀತಿ ಸರಕಾರಿ ಕಚೇರಿಗಳಲ್ಲಿ ‘ಲಂಚ ಮಹಾಪಾಪ’ ‘ಮಧ್ಯವರ್ತಿಗಳಿಗೆ ಅವಕಾಶವಿಲ್ಲ’ ಅನ್ನುವ ಬೋರ್ಡ್ ನೇತಾಡುತ್ತಿರುತ್ತದೆ. ಅಲ್ಲಿ ಬ್ರಹ್ಮಾಂಡ ಗಾತ್ರದ […]

Continue Reading

ಡಿವೈಎಫ್ಐ 14 ನೇ ದ.ಕ ಜಿಲ್ಲಾ ಸಮ್ಮೇಳನದ ಲೋಗೋ ಅನಾವರಣ.

“ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ” ಎಂಬ ಘೋಷಣೆಯಡಿ ಡಿವೈಎಫ್ಐ ಯುವಜನ ಸಂಘಟನೆಯ 14ನೇ ದ.ಕ ಜಿಲ್ಲಾ ಸಮ್ಮೇಳನವು ಅಕ್ಟೋಬರ್ 15 ರಂದು ಮಂಗಳೂರಿನಲ್ಲಿ ನಡೆಯಲಿರುವುದು. ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆಯಾದ ಯುವ ಪ್ರತಿನಿಧಿಗಳು ಭಾಗವಹಿಸಿ ನಾಡಿನ ಜನಸಾಮಾನ್ಯರ ಬದುಕಿನಲ್ಲಿ ನೆಮ್ಮದಿ ಮೂಡಿಸುವ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಅನ್ಯಾಯಗಳ ವಿರುದ್ಧ ಹೋರಾಡುವ, ಶಿಕ್ಷಣದಿಂದ ವಂಚಿತ ಹಾಗೂ ನಿರುದ್ಯೋಗದಿಂದ ಬಳಲುತ್ತಿರುವ ಯುವಜನರ ಸಮಸ್ಯೆಗಳಿಗೆ ಮಾರ್ಗೋಪಾಯವನ್ನು ಕಂಡುಕೊಳ್ಳುವ ಮತ್ತವುಗಳ ವಿರುದ್ಧ ರಾಜಿರಹಿತ ಹೋರಾಟಗಳನ್ನು ಸಂಘಟಿಸುವ […]

Continue Reading

ಅಬ್ಬಬ್ಬಾ.. ತಲೆ ಎತ್ತಿದೆ ಕೆಲವು ಅಕ್ರಮ ಮಸಾಜ್ ಸೆಂಟರ್’ಗಳು.! ಸಲೂನ್, ಸ್ಪಾ ಹೆಸರಲ್ಲಿ ಚರ್ಮದಂಧೆ.!

ಬುದ್ದಿವಂತರ ಜಿಲ್ಲೆಗೊಂದು ಕಪ್ಪು ಚುಕ್ಕೆ.! ನಗರದ ಕೆಲವು ಕಡೆಗಳಲ್ಲಿ ನಾಯಿಕೊಡೆಗಳಂತೆ, ಇಲಾಖೆಯ ಕಣ್ಣು ತಪ್ಪಿಸಿ ರಾಜಾರೋಷವಾಗಿ ಹಲವು ಮಸಾಜ್ ಸೆಂಟರ್ ಗಳು ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ. ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಬಾಗಿಲು ತೆಗೆದಿರುವ ಮಸಾಜ್ ಸೆಂಟರ್ ಗಳ ಕಥೆ ಬರೆಯುವುದಾದರೆ ಅದೊಂದು ಕಾದಂಬರಿಯಾದೀತು. ಕಟ್ಟಡದೊಳಗೆ ನಡೆಯುತ್ತಿರುವುದು ಅಪ್ಪಟ ಸೆಕ್ಸ್ ದಂಧೆ. ಒಂದೊಂದು ಮಸಾಜ್ ಸೆಂಟರ್ ನೊಳಗಡೆ ಏಳೆಂಟು ರೂಮುಗಳಿದ್ದು, ಐದಾರು ಚೆಂದುಳ್ಳಿ ಚೆಲುವೆಯರನ್ನಿಟ್ಟು ದಂಧೆ […]

Continue Reading

ಕಾಟಿಪಳ್ಳ: ಜಿ.ಹುಸೇನ್ ಬಾವ (ರೆಡಕ್ ಬಾವಾ) ವಿಧಿವಶ

ಕಾಟಿಪಳ್ಳ 2 ನೇ ಬ್ಲಾಕ್ ನಿವಾಸಿಯಾಗಿರುವ ಜಿ. ಹುಸೇನ್ ಬಾವಾ ಇಂದು ಸಂಜೆ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಸ್ಥಳೀಯವಾಗಿ ರೆಡಕ್ ಬಾವಾ ಎಂದೇ ಪರಿಚಿತರಾಗಿದ್ದರು. ಪಣಂಬೂರು ಮುಸ್ಲಿಂ ಜಮಾಹತ್ ಕಮಿಟಿ ಸದಸ್ಯರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಸ್ಥಳೀಯವಾಗಿ ಸಮಾಜ ಸೇವೆಯ ಮೂಲಕ ಖ್ಯಾತಿಗೊಳಗಾಗಿದ್ದರು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗಮನಾರ್ಹವಾದ ಮತಗಳನ್ನು ಪಡೆದಿದ್ದರು.

Continue Reading

ಚೈತ್ರಾ ಟೀಮ್ ಬಹುಕೋಟಿ ವಂಚನೆ ಪ್ರಕರಣ: ವಿನಯ್ ಗುರೂಜಿ, ವಿಹೆಚ್​ಪಿ, ಭಜರಂಗದಳ ಮುಖಂಡರಿಗೆ ಸಿಸಿಬಿ ನೋಟಿಸು

ಬಹುಕೋಟಿ ವಂಚನೆ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆದಕಿದಷ್ಟು ಬೆಚ್ಚಿ ಬೀಳಿಸುವ ವಿಷಯಗಳು ಹೊರಬರುತ್ತಿವೆ. ಮಾಹಿತಿ ಪ್ರಕಾರ, ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಹಲವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಇನ್ನೂ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ಪೋನ್ ಮೂಲಕ ಮೌಖಿಕ ಸೂಚನೆ ನೀಡಿದೆ ಎನ್ನಲಾಗಿದೆ. ಭಜರಂಗದಳ, ವಿಹೆಚ್​ಪಿ, ಹಿಂದೂ ಜಾಗರಣೆ ವೇದಿಕೆಯ ಮುಖಂಡರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಿಂದುತ್ವ ನಾಯಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವದೂತ ವಿನಯ್ ಗುರೂಜಿಗೆ ವಿಚಾರಣೆಗೆ […]

Continue Reading

ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ವಂಚನೆ ಪ್ರಕರಣ; ಮೀನು ವ್ಯಾಪಾರಿಗೆ ಮೋಸ

ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಲ್ಲಿ ಎಂಎಲ್ಎ ಟಿಕೇಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಹಿಂದೂ ಪೈರ್ ಬ್ರಾಂಡ್ ಚೈತ್ರಾ ಕುಂದಾಪುರ ವಿರುದ್ಧ ಒಂದೊಂದೇ ವಂಚನೆ ಪ್ರಕರಣಗಳು ದಾಖಲಾಗುತ್ತಿದೆ.ಇದೀಗ ಕೋಟ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣವೊಂದು ದಾಖಲಾಗಿದೆ. ಸುದಿನ್ ಎಂಬವರು ಮೀನು ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿದ್ದು,, 2015 ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿತ್ತು. ತಾನು ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿದ್ದು, ಹಲವು ಮಂತ್ರಿ ಮಹೋದಯರ ಹಾಗೂ ಶಾಸಕರ ನಿಕಟ ಸಂಪರ್ಕದಲ್ಲಿರುವುದಾಗಿ ತಿಳಿಸಿ, ಉಡುಪಿ ಹಾಗೂ ಕೋಟದಲ್ಲಿ […]

Continue Reading