ಗಂಜಿಮಠ: ರಾಷ್ಟ್ರೀಯ ಹೆದ್ದಾರಿಯಲ್ಲೇ ಹರಿಯುತ್ತಿದೆ ಡ್ರೈನೇಜ್ ನೀರು; ರೋಗದ ಭೀತಿಯಲ್ಲಿ ನಾಗರಿಕರು. ಗಂಜಿಮಠ ಪಿಡಿಓ, ಜನ ಪ್ರತಿನಿಧಿಗಳು ಮೌನ

ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂಂಜಾ ಪೆಟ್ರೊಲ್ ಪಂಪ್ ಎದುರುಗಡೆ ಇರುವ ಡಿ’ಕುನ್ಹಾ ಕ್ರಸ್ಟ್ ವಸತಿ ಸಮುಚ್ಚಾಯದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ಮಾತ್ರವಲ್ಲದೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ. ವಸತಿ ಸಮುಚ್ಚಾಯದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯದಿಂದ ತುಂಬಿದ ಕೊಳಚೆ ನೀರು ಸರಾಗವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಆದರೆ ಗಂಜಿಮಠ ಗ್ರಾಮ ಪಂಚಾಯತ್ […]

Continue Reading

ಹಿಂದುತ್ವದ ವಿಷ ವರ್ತುಲದಲ್ಲಿ ಸೌಜನ್ಯ ಹೋರಾಟ.

✍️.ನವೀನ್ ಸೂರಿಂಜೆ ‘ಜಸ್ಟಿಸ್ ಫಾರ್ ಸೌಜನ್ಯ’ ಎಂಬ ಫೇಸ್‌ಬುಕ್ ಪೇಜ್ ಸೌಜನ್ಯ ಕೊಲೆಯಾದ ನಂತರ ಚಳವಳಿ ಆರಂಭಗೊಂಡ ದಿನದಿಂದಲೂ ಇದೆ. ಪ್ರಾರಂಭದಲ್ಲಿ ಸೌಜನ್ಯ ಪರವಾಗಿ‌ನ ಎಲ್ಲ ಹೋರಾಟಗಳನ್ನು ಸಮಾನಾಗಿ ನೋಡಿ ಪ್ರಚಾರ ನೀಡುತ್ತಿತ್ತು.‌ ಬರಬರುತ್ತಾ ಎಡಪಂಥೀಯರ ಹೋರಾಟವನ್ನು ನಿರ್ಲಕ್ಷ್ಯ ಮಾಡಿ ಹಿಂದುತ್ವವಾದಿಗಳ ಹೋರಾಟವನ್ನು ಮಾತ್ರ ಪ್ರಚಾರ ಮಾಡಲಾರಂಭಿಸಿತು.2015 ನವೆಂಬರ್ ತಿಂಗಳು. ಮಂಗಳೂರಿನಲ್ಲಿ ಹಿಂದೂ ಮುಸ್ಲಿಂ ಕೋಮುಗಲಭೆ ನಡೆಯುತ್ತಿತ್ತು. ಶಾಲಾಕಾಲೇಜು, ಕಂಪನಿ ಕೆಲಸಗಳಿಗೆ ರಜೆ ನೀಡಲಾಗಿತ್ತು. ನಾವೂರು ಗ್ರಾಮದ ಹರೀಶ್ ಪೂಜಾರಿ ಮಂಗಳೂರಿನ ಕಾಲೇಜೊಂದರಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. […]

Continue Reading

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಬಲಾತ್ಕಾರ ಎಸಗಿದ ಪ್ರಕರಣ : ಆರೋಪಿ ಖುಲಾಸೆ

ಪುತ್ತೂರು : ಆರು ವರ್ಷಗಳ ಹಿಂದಿನ ಪ್ರಕರಣದ ಆರೋಪಿ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕುದ್ರಡ್ಕ ನಿವಾಸಿ ಪ್ರಶಾಂತ್ ಯಾನೆ ನಾರಾಯಣ ಎಂಬವರನ್ನು ಜಿಲ್ಲಾ ನ್ಯಾಯಾಲಯವು ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ದಿನಾಂಕ 26.12.2017 ರಂದು ಬೆಳ್ತಂಗಡಿ ತಾಲೂಕು,ಮಚ್ಚಿನ ಗ್ರಾಮದ ಕುದ್ರಡ್ಕ ಎಂಬಲ್ಲಿ ರಾತ್ರಿ ವೇಳೆಯಲ್ಲಿ ಆರೋಪಿಯನ್ನಲಾಗಿದ್ದ ಪ್ರಶಾಂತ್ ಯಾನೆ ನಾರಾಯಣ ಎಂಬವರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ […]

Continue Reading

ಅನೈತಿಕ ಪೊಲೀಸ್ ಗಿರಿ: ಏಳು ಮಂದಿ ಆರೋಪಿಗಳ ಬಂಧನ

ಮಂಗಳೂರು ನಗರದ ಬಾವುಟಗುಡ್ಡೆ ಸೈಂಟ್ ಅಲೋಶಿಯಸ್ ಕಾಲೇಜಿನ ಬಳಿ ಶಾಮೀರ್ ಹಾಗೂ ಇಬ್ರಾಹಿಂ ಫಾಹೀಮ್ ಎಂಬವರನ್ನು ದಿನಾಂಕ 23-08-2023 ರಂದು ತಾಬೀಶ್ ಹಾಗೂ ಆತನ ಸಹಚರರು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ನಡೆಸಿದ ಬಗ್ಗೆ ಇಬ್ರಾಹಿಂ ಫಾಹೀಮ್ ಎಂಬವರು ದೂರು ನೀಡಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 95/2023 ಕಲಂ 323, 324, 341, 363, 506 ರ ಜೊತೆಗೆ 149 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. ಉಪ್ಪಳ ಮೂಲದ ವಿದ್ಯಾರ್ಥಿಯನ್ನು ಅಡ್ಯಾರ್ ಕಣ್ಣೂರು […]

Continue Reading

ಕಾರು ತಡೆದು ಹಲ್ಲೆ ನಡೆಸಿ, ಹಣ, ಚಿನ್ನ ಲೂಟಿ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಪುತ್ತೂರು : ಕೆಲವು ದಿನಗಳ ಹಿಂದೆ ಉದ್ಯಮಿಯೋರ್ವರಿಗೆ ಹಲ್ಲೆ ನಡೆಸಿ ಹಣ ಮತ್ತು ಚಿನ್ನದ ಉಂಗುರವನ್ನು ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗೆ ಜಿಲ್ಲಾ ನ್ಯಾಯಾಲಯ ನೀರಿಕ್ಷಣಾ ಜಾಮೀನು ಮಂಜೂರು ಮಾಡಿದೆ. ಬೆಂಗಳೂರಿನಲ್ಲಿ ಪಿ.ಆರ್.ಸಿಕ್ಸ್ ಗ್ರೂಪ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ,ಪಾಂಬಾರು ಎಂಬಲ್ಲಿಯ ಕೃಷಿಕ ಪ್ರದೀಪ್ ಪಾಂಬಾರು ಎಂಬವರು ನೀಡಿದ್ದ ದೂರಿನ ಮೇರೆಗೆ ಮನೋಜ್ ಭಂಡಾರಿ ಮತ್ತು ಜಿತನ್ ರೈ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದರು. ಜುಲೈ 18ರಂದು ಪ್ರದೀಪ್ ಪಾಂಬಾರು ಮತ್ತು ಸ್ನೇಹಿತ […]

Continue Reading

ಜಿಲ್ಲೆಯಲ್ಲಿ ಸ್ವ ಸಮುದಾಯದ ಮಧ್ಯೆಯೇ ಅನೈತಿಕ ಪೊಲೀಸ್ ಗಿರಿ: ಡ್ರಗ್ಸ್ ಜಾಲಕ್ಕೆ ಸಿಲುಕಿ ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಯನ್ನು ಫ್ಲ್ಯಾಟ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ

ಪ್ರಭಾವಿ ಸಂಘಟನೆ ಮುಖಂಡನೊಬ್ಬನ ಪುತ್ರ ಶಾಮೀಲು.! ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾದ ಕರಾಳದಂಧೆ ಅವ್ಯಾಹತವಾಗಿ ಹಬ್ಬಿದೆ. ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಎಷ್ಟೇ ಜನಜಾಗೃತಿ ನಡೆಸಿದರೂ ಡ್ರಗ್ಸ್ ಮಾಫಿಯಾಕ್ಕೆ ಬ್ರೇಕ್ ಹಾಕಲು ವಿಫಲವಾಗಿದೆ. ಕುದ್ರೋಳಿ ಪರಿಸರದಲ್ಲಿ ಮುಸ್ಲಿಂ ಸಂಘ ಸಂಸ್ಥೆಗಳು ಒಗ್ಗೂಡಿ ಡ್ರಗ್ಸ್ ವಿರುದ್ಧ ಸಮರ ಸಾರಿದೆ.ಡ್ರಗ್ಸ್ ಜಾಲಕ್ಕೆ ಯುವಕರು ಮಾತ್ರವಲ್ಲ,ಯುವತಿಯರು ಕೂಡ ಡ್ರಗ್ಸ್ ಕರಾಳದಂಧೆಗೆ ಸಿಲುಕಿ ಬಲಿಪಶುವಾಗಿದ್ದಾರೆ. ಇದೀಗ ಡ್ರಗ್ಸ್ ಮಾಫಿಯಾದ ಬಗೆಗಿನ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರ ವಿದ್ಯಾರ್ಥಿಯಾಗಿರುವ ಉಪ್ಪಳ ಮೂಲದ ಮುಸ್ಲಿಂ […]

Continue Reading

ಬಿಜೆಪಿ ನಡೆಸುವ ಸೌಜನ್ಯ ಪರ ಹೋರಾಟಕ್ಕೆ ಸಂಸದ ಡಾ! ವೀರೇಂದ್ರ ಹೆಗ್ಗಡೆ ಭಾಗವಹಿಸುತ್ತಾರೆಯೇ ಬಿಜೆಪಿಗೆ ಬಿ.ಕೆ ಇಮ್ತಿಯಾಝ್ ಪ್ರಶ್ನೆ

ಮಂಗಳೂರು : ಸೌಜನ್ಯ ಹೋರಾಟ ರಾಜ್ಯಕ್ಕೆ ಹಬ್ಬಿದ ನಂತರ ಬಿಜೆಪಿ ಹೋರಾಟಕ್ಕಿಳಿದಿದೆ ಬಿಜೆಪಿ ಹೋರಾಟಕ್ಕೆ ಸಂಸದ ಡಾ! ವೀರೇಂದ್ರ ಹೆಗ್ಗಡೆ ಭಾಗವಹಿಸುತ್ತಾರೆಯೇ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಪ್ರಶ್ನಿಸಿದ್ದಾರೆ. ಅವರು ಇಂದು (24-8-2023) ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಆಗಸ್ಟ್ 28ರಂದು ಸೌಜನ್ಯ ಸಾವಿಗೆ ನ್ಯಾಯಕ್ಕೆ ಒತ್ತಾಯಿಸಿ ನಡೆಯಲಿರುವ ಬೆಳ್ತಂಗಡಿ ಚಲೋ ಬೆಂಬಲಿಸಿ ನಗರದಲ್ಲಿ ಜರುಗಿದ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸೌಜನ್ಯ ಹತ್ಯೆ, ಅತ್ಯಾಚಾರ ಪ್ರಕರಣದಲ್ಲಿ […]

Continue Reading

ಚಲೋ ಬೆಳ್ತಂಗಡಿ, ಮಹಾಧರಣಿ. “ಸೌಜನ್ಯ” ಹೋರಾಟ ಯಶಸ್ವಿಗೊಳಿಸಲು ಸಮಾನ ಮನಸ್ಕರ ಒಕ್ಕೂಟದ ಮನವಿ

ಸಿಬಿಐ ನ್ಯಾಯಾಲಯದ ತೀರ್ಪಿನ ತರುವಾಯ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವ ಅನುಮಾನಗಳನ್ನು ನಾಗರಿಕರಲ್ಲಿ ಬಲಗೊಳಿಸಿದೆ. ಈ ಹಿನ್ನಲೆಯಲ್ಲಿ ಜನಾಕ್ರೋಶ ಭುಗಿಲೆದ್ದಿದ್ದು, ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ ಸರಕಾರ ಸೌಜನ್ಯ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ಮು ರಚಿಸಬೇಕು, ಹಾಗೂ ಕುಮಾರಿ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ ಆತನ ಸೋದರಿ ಯಮುನ ಸಹಿತ ಧರ್ಮಸ್ಥಳ, ಉಜಿರೆ ಭಾಗಗಳಲ್ಲಿ ನಡೆದಿರುವ ಕೊಲೆ, ಅಸಹಜ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು […]

Continue Reading

ಬೀದಿ ವ್ಯಾಪಾರಿಗಳಿಗಾಗಿರುವ ಯೋಜನೆಯನ್ನು ಸರಕಾರವೇ ದುರುಪಯೋಗ ಮಾಡುವುದು ಎಷ್ಟು ಸರಿ: ಬಿ.ಕೆ ಇಮ್ತಿಯಾಝ್

ಬೀದಿಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿಗಳ ಸ್ವ ನಿಧಿ ಸಾಲ ಯೋಜನೆಗೆ ಮಂಗಳೂರು ಮಹಾ ನಗರದಲ್ಲಿ ಈಗಾಗಲೇ 4000ಕ್ಕೂ ಹೆಚ್ಚು ಜನರಿಗೆ (ಬಹುತೇಕರು ಬೀದಿ ವ್ಯಾಪಾರಿಗಳಲ್ಲ) ಸಾಲ ನೀಡಲಾಗಿದೆ. ಮತ್ತೆ ನಾಳೆ ಪುರಭವನದಲ್ಲಿ ಮತ್ತೆ ಬೀದಿ ವ್ಯಾಪಾರಿಗಳಿಗೆ ಸಾಲ ಮೇಳ ಹಮ್ಮಿಕೊಳ್ಳಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೆ ಮಂಗಳೂರು ಮಹಾ ನಗರದಲ್ಲಿ 3000ಜನರಿಗೆ ಸಾಲ ಕೊಡುವ ಗುರಿ ನೀಡಲಾಗಿದೆ. 2021ರಲ್ಲಿ ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಿ 1053 ಜನರನ್ನು ಗುರುತಿಸಿದ್ದರು ಅದರಲ್ಲಿ ನಿಯಮಾನುಸಾರ […]

Continue Reading

ಹಿಂದುತ್ವವಾದಿಗಳಿಗೆ ಮತ್ತು ಮುಂಡಾಸುಧಾರಿಗಳಿಗೆ ಏಕಕಾಲದಲ್ಲಿ ಆಗಸ್ಟ್ 28 ರ “ಬೆಳ್ತಂಗಡಿ ಚಲೋ” ಭಯ ಕಾಡುತ್ತಿದೆ.

“ಅಂದು ಪದ್ಮಲತಾ, ಇಂದು ಸೌಜನ್ಯ” ಎಂಬ ಘೋಷವಾಕ್ಯವೇ ಹಿಂದುತ್ವವಾದಿಗಳ ನಿದ್ದೆಗೆಡಿಸಿದೆ. ✍️. ನವೀನ್ ಸೂರಿಂಜೆ ಆಗಸ್ಟ್ ತಿಂಗಳ ಅಂತ್ಯ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಹಿಂದುತ್ವವಾದಿಗಳು ಬೇರೆ ಬೇರೆ ಹೆಸರಿನಲ್ಲಿ ಸೌಜನ್ಯ ಪರ ಹೋರಾಟವನ್ನು ಹಮ್ಮಿಕೊಂಡಿದ್ದಾರೆ. ಯಾಕೆಂದರೆ ಹಿಂದುತ್ವವಾದಿಗಳು ಮತ್ತು ಮುಂಡಾಸುಧಾರಿಗಳಿಗೆ ಏಕಕಾಲದಲ್ಲಿ ಆಗಸ್ಟ್ 28 ರ “ಬೆಳ್ತಂಗಡಿ ಚಲೋ” ಭಯ ಕಾಡುತ್ತಿದೆ. ಆಗಸ್ಟ್ 28 ರ ಬೆಳ್ತಂಗಡಿ ಚಲೋದಲ್ಲಿ “ಅಂದು ಪದ್ಮಲತಾ, ಇಂದು ಸೌಜನ್ಯ” ಎಂಬ ಘೋಷವಾಕ್ಯವೇ ಹಿಂದುತ್ವವಾದಿಗಳ ನಿದ್ದೆಗೆಡಿಸಿದೆ. ಅದಕ್ಕಾಗಿಯೇ ತರಾತುರಿಯಲ್ಲಿ ದಕ್ಷಿಣ ಕನ್ನಡ […]

Continue Reading